ಅಪಾಯ ಸ್ಥಳಗಳಲ್ಲಿ ಭದ್ರತೆ ಹೆಚ್ಚಳ

TB Dam munirabad koppal security police
ಕೊಪ್ಪಳ ತಾಲೂಕಿನ ಮುನಿರಾಬಾದ್​ ಬಳಿ ಹಳೇ ಸೇತುವೆ ಕಡೆ ತೆರಳುವ ಜಾಗ ಬ್ಯಾರಿಕೇಡ್​ನಿಂದ ರ್ನಿಬಂಧಿಸಿರುವುದು.
Published on
  • ಬ್ಯಾರಿಕೇಡ್​, ಸೈರನ್​ ಮೂಲಕ ಎಚ್ಚರಿಕೆ
  • ವಿಜಯವಾಣಿ ವರದಿ ಬೆನ್ನಲ್ಲೇ ಕ್ರಮ

ಕೊಪ್ಪಳ: ತಾಲೂಕಿನ ಮುನಿರಾಬಾದ್​ ಜಲಾಶಯದಿಂದ ನದಿಗೆ ನೀರಿನ ಹರಿವು ಹೆಚ್ಚಾಗಿದ್ದು ನದಿ ಪಾತ್ರದಲ್ಲಿನ ಅಪಾಯ ಸ್ಥಳಗಳ ಕುರಿತು ವಿಜಯವಾಣಿ ವರದಿ ಬೆನ್ನಲ್ಲೇ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.

ಜಲಾಶಯ ಬಹುತೇಕ ಭರ್ತಿಯಾಗಿದ್ದು, ಜನರ ದಂಡು ನೋಡಲು ಆಗಮಿಸುತ್ತಿದೆ. ಈ ವೇಳೆ ಕೆಲವರು ಅಪಾಯ ಸ್ಥಳದಲ್ಲಿ ಸೆಲ್ಫಿ , ೋಟೋ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಜಲಾಶಯ ಹಾಗೂ ನದಿಯಲ್ಲಿ ಅಪಾಯ ಲೆಕ್ಕಿಸದೆ ಈಜಾಡುತ್ತಿದ್ದಾರೆ. 33 ಕ್ರಸ್ಟ್​ ಗೇಟ್​ಗಳ ಮೂಲಕ 1.50 ಲಕ್ಷ ಕ್ಯೂಸೆಕ್​ ನೀರು ಹೊರ ಬಿಡಲಾಗಿದೆ. ಮುನಿರಾಬಾದ್​ ಗ್ರಾಮದ ಹಳೇ ಸೇತುವೆಗೆ ತಾಗುವಂತೆ ನೀರು ಹರಿಯುತ್ತಿದೆ. ಜಲಾಶಯದಲ್ಲೂ ನೀರಿನ ಮಟ್ಟ ಏರಿಕೆಯಾಗುತ್ತಿದೆ.

ಈ ವರ್ಷ ಬಹುಬೇಗನೇ ಜಲಾಶಯ ಭರ್ತಿಯಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನಿತ್ಯ ಜನರು ತಂಡೋಪತಂಡವಾಗಿ ನದಿ ದಡ ಹಾಗೂ ಜಲಾಶಯದತ್ತ ಹರಿದು ಬರುತ್ತಿದ್ದಾರೆ. ಕೆಲವರು ಜಲಾಶಯದಲ್ಲೇ ಈಜಾಡುವ ಹುಚ್ಚಾಟ ಮಾಡುತ್ತಿದ್ದಾರೆ. ಇನ್ನು ಕೆಲವರು ನದಿಗಿಳಿದು ನೀರಿನೊಂದಿಗೆ ಆಟವಾಡುತ್ತಿದ್ದಾರೆ. ಸೆಲ್ಫಿ ೋಟೋ, ವಿಡಿಯೋ, ರೀಲ್ಸ್​ ಮಾಡುವ ಮೂಲಕ ಅಪಾಯ ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ವಿಜಯವಾಣಿಯಲ್ಲಿ "ತುಂಗಭದ್ರಾ ಜಲಾಶಯದಲ್ಲಿ ಹುಚ್ಚಾಟ' ಶೀರ್ಷಿಕೆಯಡಿ ಸೋಮವಾರ ವರದಿ ಪ್ರಕಟಿಸಿ ಜಾಗೃತಿ ಮೂಡಿಸಲಾಗಿದೆ.

ವರದಿ ಉಲ್ಲೇಖಿಸಿ ಪೊಲೀಸ್​ ಅಧಿಕಾರಿಗಳಿಗೆ ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ ಅಗತ್ಯ ಭದ್ರತೆ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಜಲಾಶಯ, ನದಿ ಸೇರಿ ಎಲ್ಲೆಲ್ಲಿ ಅಪಾಯ ಸ್ಥಗಳಿಗಳಿರುವೆಡೆ ಭದ್ರತೆ ಹೆಚ್ಚಿಸಲಾಗಿದೆ. ಸಿಪಿಐ, ಪಿಎಸ್​ಐ ಸೇರಿ ಇತರ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಜನರ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಬ್ಯಾರಿಕೇಡ್​ ಅಳವಡಿಸಿದ್ದು, ಪೊಲೀಸ್​ ವಾಹನದ ಮೂಲಕ ಸೈರನ್​ ಬಳಸಿ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ.

ತುಂಗಭದ್ರಾ ಜಲಾಶಯ ಸೇರಿ ನದಿ ಪಾತ್ರದ ಅಪಾಯ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ನಮ್ಮ ಸಿಪಿಐ, ಪಿಎಸ್​ಐಗಳು ಸ್ಥಳದಲ್ಲಿದ್ದು ನೋಡಿಕೊಳ್ಳುತ್ತಿದ್ದಾರೆ. ಬ್ಯಾರಿಕೇಡ್​ ಅಳವಡಿಸಿದ್ದು, ವಾಹನಗಳಲ್ಲಿ ಸೈರನ್​ ಬಳಸಿ ಜನರ ನದಿ ಕಡೆಗೆ ಹೋಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಡಾ.ರಾಮ್​ ಎಲ್​. ಅರಸಿದ್ದಿ. ಎಸ್ಪಿ ಕೊಪ್ಪಳ.

ಡಾ.ರಾಮ್​ ಎಲ್​. ಅರಸಿದ್ದಿ. ಎಸ್ಪಿ ಕೊಪ್ಪಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net