Photo Gallery | ತುಂಗಾಭದ್ರಾ ಜಲಾಶಯ ಈಗ ಜಗಮಗ: ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿರುವ ಜಲಧಾರೆ..

ಕಣ್ಮನ ಸೆಳೆಯುತ್ತಿದೆ ವರ್ಣರಂಜಿತ ತುಂಗಾಭದ್ರಾ ಜಲಾಶಯ - youtube
Published on

ವಿಜಯನಗರ: ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಾಭದ್ರಾ ಜಲಾಶಯ ಇಂದು ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದೆ. ಧಾರಾಕಾರ ಮಳೆ, ಉಕ್ಕಿ ಹರಿಯುವ ನದಿಗಳಿಂದ ತುಂಬಿರುವ ಜಲಾಶಯದ ಜಲಧಾರೆ ವರ್ಣರಂಜಿತವಾಗಿ ಕಾಣಿಸುತ್ತಿದೆ.

ತುಂಗಾಭದ್ರಾ ಜಲಾಶಯ ಈಗಾಗಲೇ ಭರ್ತಿಯಾಗಿದೆ. ಜಲಾಶಯದ 33 ಕ್ರಸ್ಟ್ ಗೇಟ್ ಮೂಲಕ ನದಿಗೆ ನೀರನ್ನು ಹರಿಸಲಾಗುತ್ತಿದೆ. ಗೇಟ್​​ಗಳಿಗೆ ವಿವಿಧ ಬಣ್ಣಗಳ ವಿದ್ಯುತ್ ದೀಪಗಳ ಬೆಳಕನ್ನು ಹಾಯಿಸಲಾಗಿದೆ. ನೀರಿಗೆ ಬಣ್ಣಗಳು ಬಳಿದಂತೆ ಭಾಸವಾಗುತ್ತಿದೆ. ಅಲ್ಲದೆ, ತುಂಗಾಭದ್ರಾ ಜಲಾಶಯದ ಪಾರ್ಕ್​ಗೂ ಜೀವ ಕಳೆ ಬಂದಿದೆ. ಕತ್ತಲಾಗುತ್ತಿದ್ದಂತೆ ಜಲಾಶಯದ ಸೌಂದರ್ಯ ಕಣ್ಮನ ಸೆಳೆಯುತ್ತಿದೆ.

ನೀರನ್ನು 33 ಕ್ರಸ್ಟ್ ಗೇಟ್ ಮೂಲಕ ಯಾವಾಗ ಬಿಡುತ್ತಾರೋ ಎಂದು ಜನರು ಕಾತುರದಿಂದ ಕಾಯುತ್ತಿದ್ದರು. ಇಂದು ಅಂಥವರು ಜಲಾಶಯದ ಸೌಂದರ್ಯ ಕಣ್ತುಂಬಿಕೊಂಡರು. ತಮ್ಮ ಮೊಬೈಲ್​ಫೋನ್​ಗಳ ಮೂಲಕ ಫೋಟೋ-ವಿಡಿಯೋ ತೆಗೆದುಕೊಂಡು, ಸೌಂದರ್ಯವನ್ನು ಸ್ಮರಣೀಯವಾಗಿಸಿಕೊಂಡರು. ತುಂಗಾಭದ್ರಾ ಜಲಾಯಶದ ವರ್ಣರಂಜಿತ ದೃಶ್ಯಗಳು ಕೆಲವು ಚಿತ್ರಣಗಳು ಇಲ್ಲಿವೆ.

Dam 4
Dam 5
Dam 6
Dam 7
Dam 8
Dam 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net