ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಇಳಿಕೆ

news
ತುಂಗಭದ್ರಾ ಜಲಾಶಯ
Published on

ಹೊಸಪೇಟೆ: ತುಂಗಭದ್ರಾ ಜಲಾಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ ಹಿನ್ನಲೆಯಲ್ಲಿ ಕಳೆದ ಒಂದುವಾರದಿಂದ ಜಲಾಶಯಕ್ಕೆ ಒಂದು ಲಕ್ಷ ಕ್ಯೂಸೆಕ್‌ ಗೂ  ಅಧಿಕ ಇದ್ದ ಒಳಹರಿವು ಮಂಗಳವಾರ 92 ಸಾವಿರ ಕ್ಯೂಸೆಕ್‌ ಗೆ ಇಳಿಕೆ ಕಂಡಿದೆ.

1633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1629.16 ಅಡಿ ನೀರಿನ ಸಂಗ್ರಹವಿದೆ. ಮಂಗಳವಾರ 92636 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. ಸೋಮವಾರ 113402 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು.

ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿರುವುದರಿಂದ ಸಹಜವಾಗಿಯೇ ಒಳಹರಿವು ಕಡಿಮೆಯಾಗಿದೆ. ಆದರೆ, ಸತತವಾಗಿ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದರಿಂದ ರೈತ ಸಮುದಾಯ ಸಂತಸಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net