

ಸಿಂಧನೂರು: ನಗರದ ಖದರಿಯ ಕಾಲನಿಯಲ್ಲಿ ತಾಯಮ್ಮ ದೇವಿಯ ಜಾತ್ರಾ ಮಹೋತ್ಸವ ಇತ್ತೀಚಿಗೆ ವಿಜೃಂಭಣೆಯಿಂದ ನಡೆಯಿತು.
ಕುಂಭ-ಕಳಸ, ಬಾಜಾ-ಭಜಂತ್ರಿಯೊಂದಿಗೆ ಅದ್ದೂರಿ ಮೆರವಣಿಗೆ ನಡೆಸಿ ಕಲಶಾರೋಹಣ ನೆರವೇರಿಸಲಾಯಿತು. ಕಂಪ್ಲಿಯ ತಾರಾನಗರದ ಕಲಾವಿದರು ವೀರಗಾಸೆ ನೃತ್ಯ ಮಾಡಿದರು. ಪುರವಂತರು ಭಕ್ತರಿಗೆ ಶಸ್ತ್ರ ಹಾಕಿದರು. ಒಡಪು ಹೇಳುವುದು, ಡೊಳ್ಳು ಕುಣಿತ ನಡೆದವು.
ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ವೀರಭದ್ರಗೌಡ ಕಾನಿಹಾಳ, ಅಮರೇಶ ಸಾಹುಕಾರ, ನಾಗರಾಜ ವಕೀಲ, ಶೇಖರಗೌಡ ಹುಡೇದ್, ವೀರಯ್ಯಸ್ವಾಮಿ, ಕಂಟೆಯ್ಯಸ್ವಾಮಿ, ವೀರಭದ್ರಪ್ಪ ವಕೀಲ್, ಗುರುಪಾದಯ್ಯಸ್ವಾಮಿ, ಮಹಾಂತಗೌಡ, ಬಸವರಾಜ ಮನ್ನಾಪುರ್, ಬದ್ರಿ ಗೌಡ, ಶರಣಪ್ಪ ಗೌಡ ಅಗರದಾಳ, ದೇವರೆಡ್ಡಿ, ಶರಣಪ್ಪಗೌಡ ಜಂಬಲದಿನ್ನಿ ಇದ್ದರು.