ಮಾದಕ ವ್ಯಸನದಿಂದ ದೂರವಿರಿ

Untitled-2
ನೆಲಮಂಗಲದ ನಗರ ಠಾಣೆ ಹಾಗೂ ವಿವಿಧ ಶಾಲೆಗಳ ಸಹಯೋಗದಲ್ಲಿ ಮಾದಕವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ನಗರ ಠಾಣೆ ಇನ್​ಸ್ಪೆಕ್ಟರ್​ ಭರತ್​ಗೌಡ ಚಾಲನೆ ನೀಡಿದರು. ಸಬ್​ ನಗರ ಠಾಣೆ ಇನ್​ಸ್ಪೆಕ್ಟರ್​ ಭರತ್​ಗೌಡ ನಂಜಯ್ಯ ಇತರು ಇದ್ದರು.
Published on

ನೆಲಮಂಗಲ : ವಿದ್ಯಾರ್ಥಿ ಜೀವನ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳುವ ಮಹತ್ವದ ಘಟ್ಟ. ಈ ಹಂತದಲ್ಲಿ ಮಾದಕವಸ್ತು ಸೇರಿ ಆರೋಗ್ಯ ಮತ್ತು ಭವಿಷ್ಯಕ್ಕೆ ಮಾರಕವಾಗುವಂತಹ ಯಾವುದೇ ಚಟಗಳಿಂದ ದೂರವಿರಬೇಕು ಎಂದು ನಗರ ಠಾಣೆ ಇನ್​ಸ್ಪೆಕ್ಟರ್​ ಭರತ್​ಗೌಡ ತಿಳಿಸಿದರು.

ನಗರದ ಪ್ರವಾಸಿ ಮಂದಿರದ ಬಳಿ ನಗರ ಪೊಲೀಸ್​ ಠಾಣೆ ಹಾಗೂ ವಿವಿಧ ಶಾಲೆಗಳ ಸಹಯೋಗದಲ್ಲಿ ಮಾದಕವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪಣ ತೊಡಬೇಕು. ಪ್ರತಿಯೊಬ್ಬರೂ ಕಾನೂನು ಪರಿಪಾಲಿಸುವ ಮೂಲಕ ಸಮಾಜದ ಸ್ವಾಸ್ಥ$್ಯ ಕಾಪಾಡಬೇಕು. ಸಾಮಾಜಿಕ ಮಾಧ್ಯಮ ಹಾಗೂ ಜಾಲತಾಣಗಳ ಬಳಕೆ ಬಗ್ಗೆ ಎಚ್ಚರಿಕೆ ವಹಿಸುವುದು ಬಹಳ ಅಗತ್ಯ ಎಂದರು.

ತೀವ್ರ ಕುತೂಹಲ, ಸ್ನೇಹಿತರ ಒತ್ತಾಯ, ಗೆಳೆಯರ ಗುಂಪಿನಲ್ಲಿ ಒಂದಾಗಬೇಕೆಂಬ ಭಾವನೆ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು, ತಾತ್ಕಾಲಿಕ ಸಮಸ್ಯೆ ಮರೆಯಲು ಹೀಗೆ ಅನೇಕ ಕಾರಣಗಳಿಗಾಗಿ ಮಾದಕ ವಸ್ತುಗಳ ಸೇವನೆ ಪ್ರಾರಂಭಿಸುತ್ತಾರೆ. ಮುಂದೆ ಅದೇ ವ್ಯಸನವಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದರು.

ಜಾಗೃತಿ ಜಾಥಾ : ನಗರದ ಪ್ರವಾಸಿ ಮಂದಿರ ಬಳಿ ಸಮಾವೇಶಗೊಂಡ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಶ್ರೀ ಬಸವೇಶ್ವರ ಪ್ರೌಢಶಾಲೆ, ಶ್ರೀ ಶ್ರೀನಿವಾಸ ಸ್ಮಾರಕ ಪ್ರೌಢಶಾಲೆ, ಮಂಜುನಾಥ ಬಾಲಕಿಯರ ಪ್ರೌಢಶಾಲೆ ಹಾಗೂ ಜ್ಞಾನ ವಾಹಿನಿ ಶಾಲೆಯ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಗರ ಮುಖ್ಯರಸ್ತೆ ಮೂಲಕ ಡಾ.ಅಂಬೇಡ್ಕರ್​ ಕ್ರೀಡಾಂಗಣದವರೆಗೂ ಜಾಗೃತಿ ಜಾಥಾ ನಡೆಸಿದರು. ನಗರ ಪೊಲೀಸ್​ ಠಾಣೆ ಸಬ್​ ಇನ್​ಸ್ಪೆಕ್ಟರ್​ ನಂಜಯ್ಯ, ಧನರಾಜ್​, ಎಎಸ್​ಐ ಬಿ.ಎಸ್​.ರು, ಚಿಕ್ಕಣ್ಣ, ಕುಮಾರ್​, ಸಿಬ್ಬಂದಿ ಚನ್ನೇಗೌಡ, ಹರೀಶ್​, ಪಠಾನ್​, ಬಸವರಾಜು, ರು, ಶಿವಕುಮಾರ್​ ಪುಷ್ಪಾ, ನೂತನ್​, ಎಪಿಡಿ ಸಂಸ್ಥೆ ವೈದ್ಯ ಡಾ.ರಾಹುಲ್​ಕೃಷ್ಣ, ಸಂಯೋಜಕಿ ಟಿ.ಎಸ್​.ದೇವಕಿ, ಮುಖ್ಯಶಿಕ್ಷಕರಾದ ತಿಪ್ಪೇಸ್ವಾಮಿ, ಡಿ.ಸಿ.ಪರಣ್ಣ, ಅಪ್ಪಸಾಹೇಬ್​ ಗಾಣಿಗೇರ್​, ನಾಗೇಶ್​, ಸುದರ್ಶನ್​, ಪದ್ಮಾವತಿ, ಟಿ.ನಾಗೇಶ್​, ತಾಂಡವಮೂರ್ತಿ, ರಾಮಯ್ಯ, ಜಗದೀಶ್​, ದಯಾನಂದ್​ ಇದ್ದರು.

ವಿದ್ಯಾರ್ಥಿಗಳಿಗೆ ಕವಿಮಾತು : ವಿದ್ಯಾರ್ಥಿಗಳು ದುರ್ಜನರು ಹಾಗೂ ದುಶ್ಚಟಗಳ ಸಹವಾಸದಿಂದ ದೂರವಿರಬೇಕು. ಒಳ್ಳೆಯ ಅಭಿರುಚಿ ಹೊಂದಿರುವ ಸ್ನೇಹಿತರು ಹಾಗೂ ಗುರುಗಳ ಒಡನಾಟ ಇಟ್ಟುಕೊಂಡು ಉತ್ತಮ ಅಭ್ಯಾಸದ ಕಡೆ ಗಮನಹರಿಸಬೇಕು. ಮನಸ್ಸನ್ನು ಯಾವಾಗಲು ಶುದ್ಧವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು. ಇದರಿಂದ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯ ಎಂದು ಇನ್​ಸ್ಪೆಕ್ಟರ್​ ಭರತ್​ಗೌಡ ಕಿವಿಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net