ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಕ್ರಿಕೇಟ್ ಪಂದ್ಯಾವಳಿ

mng--26 Aug taximen
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ಇದರ 50ನೇ ವರ್ಷದ ಸ್ವರ್ಣ ಸಂಭ್ರಮದ ಅಂಗವಾಗಿ ಸಂಘದ ಚಾಲಕ ಮಾಲೀಕರಿಗೆ ಕ್ರಿಕೆಟ್ ಪಂದ್ಯಾಟ ನಗರದ ಉರ್ವ ಮೈದಾನದಲ್ಲಿ ನಡೆಯಿತು.


ಸಂಘದ ಅಧ್ಯಕ್ಷ ಆನಂದ್ ಕೆ. ಅವರ ಉಪಸ್ಥಿತಿಯಲ್ಲಿ ಮಾಜಿ ಉಪಾಧ್ಯಕ್ಷ ಆಲ್ವಿನ್ ನೋರಾನ್ನ ಮತ್ತು ಸದಾಶಿವ ಶೆಟ್ಟಿ ಅವರಿಂದ ಪಂದ್ಯಾಟ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಕಮಲಾಕ್ಷ ಎಂ, ಹರೀಶ್ ಶೆಟ್ಟಿ ಕುತ್ತಾರು, ಉದಯಕುಮಾರ್, ಸುರೇಶ್ ಸಾಲಿಯಾನ್, ಶುಭಕರ ಶೆಟ್ಟಿ, ಲೋಕೇಶ್ ಕಶೆಕೋಡಿ, ಸಂಜಯ ಕೋಟ್ಯಾನ್, ನಾಗಪ್ಪ ಅಡ್ಯಾರು ಹಾಗೂ ಕ್ರೀಡಾ ಸಂಚಾಲಕ ಸಂದೀಪ್ ಮತ್ತು ಕರುಣಾಕರ ಉಪಸ್ಥಿತರಿದ್ದರು.

ಈ ಪಂದ್ಯಾಟದಲ್ಲಿ 16 ತಂಡಗಳು ಭಾಗವಹಿಸಿದ್ದವು. 2 ದಿನ ಲೀಗ್ ಹಂತದಲ್ಲಿ ನಡೆದು ಪೊಳಲಿ ಕೈಕಂಬ ಪಾರ್ಕ್ ಮತ್ತು ಸಿ. ವಿ ನಾಯಕ್ ಪಾರ್ಕ್ ತಂಡ ಫೈನಲ್ ಪ್ರವೇಶಿಸಿತು. ಈ ಪಂದ್ಯದಲ್ಲಿ ಪೊಳಲಿ ಕೈಕಂಬ ಪಾರ್ಕ್ ತಂಡ ಜಯಗಳಿಸಿ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು. ಎರಡನೆಯ ರನ್ನರ್ ಅಪ್ ಆಗಿ ಸಿ ವಿ ನಾಯಕ್ ಪಾರ್ಕ್ ತಂಡವಾದರೆ, ಮೂರನೇ ತಂಡವಾಗಿ ಸುಬ್ರಹ್ಮಣ್ಯ ನೆಟ್ಟಣ ರೈಲ್ವೆ ಪಾರ್ಕ್ ಆಯ್ಕೆ ಯಾಯಿತು.


ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆಯನ್ನು ಅತಿಥಿಗಳಾದ ಸ್ಥಳೀಯ ಕಾರ್ಪೊರೇಟರ್ ಗಣೇಶ್ ಕುಲಾಲ್, ಸ್ಕೂಲ್ ಟ್ರಿಪ್ ಸಂಘದ ಅಧ್ಯಕ್ಷರಾದ ಮೋಹನ್ ಅತ್ತಾವರ, ಉರ್ವ ಕೊರಗಜ್ಜ ಕ್ಷೇತ್ರ ಸಮಿತಿಯ ಅಧ್ಯಕ್ಷ ರಾಜೇಶ್, ಅಂತರಾಷ್ಟ್ರೀಯ ಪ್ರವಾಸಿ ಗೈಡ್ ಮನೋಜ್ ಕುಮಾರ್, ಸಂಘದ ಅಧ್ಯಕ್ಷರಾದ ಆನಂದ ಕೆ., ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಎಂ., ಸ್ವರ್ಣ ಸಂಭ್ರಮ ಸಮಿತಿ ಅಧ್ಯಕ್ಷ ಸತೀಶ್ ಭಟ್ ಎಂ, ಸಂದೀಪ್, ಕರುಣಾಕರ ಉಪಸ್ಥಿತರಿದ್ದರು.


ಸಂತೋಷ್ ಕೊಲ್ಯ ಕಾರ್ಯಕ್ರಮದ ನಿರೂಪಿಸಿಸಿದರು. ಸಂಘದ ಸ್ವರ್ಣ ಸಂಭ್ರಮದ ಅದೃಷ್ಟ ಚೀಟಿಯ ಡ್ರಾವನ್ನು ಅತಿಥಿಗಳ ಸಮ್ಮುಖದಲ್ಲಿ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net