

ನರೇಗಲ್ಲ: ಸಾರ್ವಜನಿಕರು ತಮ್ಮ ಆಸ್ತಿ ತೆರಿಗೆ, ನೀರಿನ ಕರ, ಯುಜಿಡಿ ಕರ ಸೇರಿದಂತೆ ಇತರೆ ಎಲ್ಲ ಕರಗಳನ್ನು ಇನ್ನು ಮುಂದೆ ಕರ್ನಾಟಕ ಒನ್ ಕೇಂದ್ರಗಳಲ್ಲಿ ಪಾವತಿಸಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ.ಪಂ. ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಹೇಳಿದರು.
ಪಟ್ಟಣ ಪಂಚಾಯಿತಿ ಆವರಣದಲ್ಲಿ ಶನಿವಾರ ವಿದ್ಯುನ್ಮಾನ ನಾರಿಕರ ಸೇವಾ ವಿತರಣೆ ನಿರ್ದೇಶನಾಲಯ (ಇಡಿಸಿಎಸ್) ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಕರ್ನಾಟಕ ಒನ್ ಕೇಂದ್ರಗಳಲ್ಲಿ ತೆರಿಗೆ ಪಾವತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ತೆರಿಗೆ ಪಾವತಿ ಸರಳೀಕರಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಇಡಿಸಿಎಸ್ ಮೂಲಕ ರಾಜ್ಯದ ಎಲ್ಲ ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ಆಸ್ತಿ ತೆರಿಗೆ ಪಾವತಿಸಲು ಬಿಬಿಪಿಎಸ್ (ಭಾರತ ಬಿಲ್ ಪೇ ಸಿಸ್ಟಮ್) ವ್ಯವಸ್ಥೆ ಜಾರಿ ಮಾಡಿದೆ. ಈ ಮೂಲಕ ಸ್ಥಳೀಯ ಸಂಸ್ಥೆಗಳ ತೆರಿಗೆಯನ್ನು ಕರ್ನಾಟಕ ಒನ್ ಕೇಂದ್ರಗಳಲ್ಲಿ ಪಾವತಿಸಬಹುದಾಗಿದೆ ಎಂದರು.
ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ರಮೇಶ ಹಲಗಿಯವರ, ಶಂಕ್ರಪ್ಪ ದೊಡ್ಡಣ್ಣವರ, ಆರೀಫ್ ಮಿರ್ಜಾ ಇತರರಿದ್ದರು.