ತೆರಿಗೆ ಪಾವತಿ ಮಾಡದಿದ್ದರೆ ಕ್ರಮ

kudlgi Tax
ಜರ್ಮಲಿ ಗ್ರಾಪಂ ವ್ಯಾಪ್ತಿಯ ಹರವದಿ ಗ್ರಾಮದಲ್ಲಿ ಕರ ವಸೂಲಾತಿ ಮಾಸಾಚರಣೆ ನಡೆಯಿತು. ಗ್ರಾಪಂ ಅಧ್ಯಕ್ಷೆ ಚನ್ನಮ್ಮ ರಾಮಪ್ಪ, ಆಡಳಿತಾಧಿಕಾರಿ ಸಿ.ರಾಮಕೃಷ್ಣಪ್ಪ, ಜಾತಪ್ಪ, ಕಾರ್ಯದರ್ಶಿ ಹಾಲಸ್ವಾಮಿ ಇದ್ದರು.
Published on

ಕೂಡ್ಲಿಗಿ: ತಾಲೂಕಿನ ಜರ್ಮಲಿ ಗ್ರಾಪಂ ವ್ಯಾಪ್ತಿಯ ಹರವದಿ ಗ್ರಾಮದಲ್ಲಿ ಕರ ವಸೂಲಿ ಮಾಸಾಚರಣೆ ನಡೆಯಿತು.

ತಾಲೂಕು ನೋಡಲ್ ಅಧಿಕಾರಿ ವಾಮದೇವ ಕೊಳ್ಳಿ ಮಾತನಾಡಿ, ಗ್ರಾಪಂನಲ್ಲಿ ತೆರಿಗೆ ಪಾವತಿಸುವವರ ಸಂಖ್ಯೆ ತೀರಾ ಕಡಿಮೆಯಿದೆ. ಮನೆ ಕಂದಾಯ, ನೀರಿನ ಕರ, ವಾಣಿಜ್ಯ ಮಳಿಗೆಗಳ ತೆರಿಗೆ ಪಾವತಿಸದಿದ್ದಲ್ಲಿ ಕಾನೂನು ಕ್ರಮ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಚ್ಚರಿಸಿದ ಅವರು, ಸಾರ್ವಜನಿಕರು ಕಾಲಕಾಲಕ್ಕೆ ಕರ ಪಾವತಿಸಿದಲ್ಲಿ ಗ್ರಾಮ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕೋರಿದರು.

ಗ್ರಾಪಂ ಅಧ್ಯಕ್ಷೆ ಚನ್ನಮ್ಮ ರಾಮಪ್ಪ, ಆಡಳಿತಾಧಿಕಾರಿ ಸಿ.ರಾಮಕೃಷ್ಣಪ್ಪ, ಗ್ರಾಪಂ ಕಾರ್ಯದರ್ಶಿ ಚೌಡಪುರದ ಕೆ.ಹಾಲಸ್ವಾಮಿ, ಸದಸ್ಯ ಓಬಕ್ಕ ವೀರಭದ್ರಪ್ಪ, ಪ್ರಮುಖರಾದ ಈರಣ್ಣ, ರಾಮಚಂದ್ರಪ್ಪ, ಕೆ.ಎಂ.ಜಾತಪ್ಪ, ಶಿವಣ್ಣ, ಕಮಲಮ್ಮ, ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net