ಹೆಜಮಾಡಿ ಟೋಲ್‌ನಲ್ಲಿ ಹಕ್ಕೊತ್ತಾಯ ಸಭೆ : ಅಧಿಕಾರಿಗೆ ಮನವಿ : ವಿನಾಯಿತಿ ಮುಂದುವರಿಸದಿದ್ದಲ್ಲಿ ಪ್ರತಿಭಟನೆ ಎಚ್ಚರಿಕೆ

manavi
ಹೆಜಮಾಡಿ ಟೋಲ್ ಸಂಗ್ರಹಣಾ ಕೇಂದ್ರದಲ್ಲಿ ಸ್ಥಳೀಯರಿಗೆ ಟೋಲ್ ವಿನಾಯಿತಿ ರದ್ದುಪಡಿಸಲು ಮುಂದಾಗಿರುವುದನ್ನು ವಿರೋಧಿಸಿ ಹೆಜಮಾಡಿ ಟೋಲ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಟೋಲ್ ಪ್ರಬಂಧಕ ತಿಮ್ಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಶೇಖರ್ ಹೆಜಮಾಡಿ, ಶೇಖಬ್ಬ ಕೋಟೆ, ರೇಷ್ಮಾ ಎ.ಮೆಂಡನ್, ಶಶಿಕಲಾ, ನವೀನ್‌ಚಂದ್ರ ಜೆ.ಸುವರ್ಣ, ವೈ.ಸುಕುಮಾರ್, ಶಶಿಕಾಂತ್ ಪಡುಬಿದ್ರಿ ಮತ್ತಿತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಹೆಜಮಾಡಿ ಟೋಲ್ ಸಂಗ್ರಹಣಾ ಕೇಂದ್ರದಲ್ಲಿ ಸ್ಥಳೀಯರಿಗೆ ಟೋಲ್ ವಿನಾಯಿತಿ ರದ್ದುಪಡಿಸಲು ಮುಂದಾಗಿರುವುದನ್ನು ವಿರೋಧಿಸಿ ಹೆಜಮಾಡಿ ಟೋಲ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಟೋಲ್ ಮುಂಭಾಗ ಶುಕ್ರವಾರ ಹಕ್ಕೊತ್ತಾಯ ಸಭೆ ನಡೆಸಿ ಟೋಲ್ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ 2016ರಿಂದ ಹೆಜಮಾಡಿ ಟೋಲ್ ಪ್ಲಾಜಾ ಕಾರ್ಯಚರಿಸುತಿದ್ದು, ಟೋಲ್ ನಿರ್ಮಾಣದಲ್ಲಿ ಈ ಭಾಗದ ಜನರು ಮನೆ, ಮಠ-ಭೂಮಿ ಕಳೆದುಕೊಂಡಿದ್ದಾರೆ. ಉಡುಪಿ ಜಿಲ್ಲಾಧಿಕಾರಿಯವರು 2016ರಲ್ಲಿ ನಡೆದ ಸಭೆಯಂತೆ ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಪಡುಬಿದ್ರಿ ಜಿಪಂ ವ್ಯಾಪ್ತಿಗೆ ಹಾಗೂ ಸಾಸ್ತಾನದಲ್ಲಿ ಕೋಟ ಜಿಪಂ ವ್ಯಾಪ್ತಿ ವಾಹನಗಳಿಗೆ ಉಚಿತ ಪ್ರಯಾಣಕ್ಕೆ ಆದೇಶ ನೀಡಿದ್ದರು.

ಆದರೆ ಏಕಾಎಕಿ ಸ್ಥಳೀಯ ವಾಹನಗಳ ಫಾಸ್ಟಾೃಗ್‌ನಿಂದ ಹಣ ಕಡಿತಗೊಳಿಸುತ್ತಿರುವುದು ಸ್ಥಳೀಯರಿಗೆ ಇದ್ದ ಟೋಲ್ ವಿನಾಯಿತಿ ರದ್ದುಪಡಿಸಿರುವುದು ತಿಳಿದುಬಂದಿದೆ. ಕೂಡಲೇ ಈ ವಿನಾಯಿತಿಯನ್ನು ಪಡುಬಿದ್ರಿ ಜಿಪಂ ವ್ಯಾಪ್ತಿಯ ವಾಹನಗಳಿಗೆ ಮತ್ತೆ ಮುಂದುವರಿಸಬೇಕು ಎಂದು ನೂರಾರು ಸಂಖ್ಯೆಯಲ್ಲಿ ಸೇರಿದ ಸಾರ್ವಜನಿಕರು ಒತ್ತಾಯಿಸಿದರು. ಒಂದು ವೇಳೆ ವಿನಾಯಿತಿ ಮುಂದುವರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಸಮಿತಿ ಅಧ್ಯಕ್ಷ ಶೇಖರ್ ಹೆಜಮಾಡಿ, ಗೌರವಾಧ್ಯಕ್ಷ ಶೇಖಬ್ಬ ಕೋಟೆ, ಸಂತೋಷ್, ಹೆಜಮಾಡಿ ಹಾಗೂ ಪಡುಬಿದ್ರಿ ಗ್ರಾಪಂ ಅಧ್ಯಕ್ಷರಾದ ರೇಷ್ಮಾ ಎ.ಮೆಂಡನ್, ಶಶಿಕಲಾ, ಪ್ರಮುಖರಾದ ನವೀನ್‌ಚಂದ್ರ ಜೆ.ಸುವರ್ಣ, ವೈ.ಸುಕುಮಾರ್, ಶಶಿಕಾಂತ್ ಪಡುಬಿದ್ರಿ, ಅಬ್ದುಲ್ ಅಝೀಜ್ ಹೆಜಮಾಡಿ, ವಿಶ್ವಾಸ್ ವಿ.ಅಮೀನ್, ಸುಧಾಕರ ಶೆಟ್ಟಿ, ರಾಲ್ಫಿ ಡಿಕೋಸ್ತ, ರವಿ ಎಚ್.ಕುಂದರ್, ನಿರ್ಮಲಾ, ಸೈಯ್ಯದ್ ನಿಝಾಮ್, ಉಮನಾಥ್ ಪಡುಬಿದ್ರಿ, ದಿನೇಶ್ ಫಲಿಮಾರು, ಜಿತೇಂದ್ರ ಪುರ್ಟಾಡೋ, ಮಧು ಆಚಾರ್ಯ, ಅಬ್ದುಲ್ ರಹ್ಮಾನ್ ಕಣ್ಣಂಗಾರ್, ಸುಧೀರ್ ಕರ್ಕೇರ, ಪ್ರಾಣೇಶ್ ಹೆಜ್ಮಾಡಿ, ಪಾಂಡುರಂಗ ಕರ್ಕೇರ, ರಮೀಜ್ ಹುಸೇನ್, ಲೋಕೇಶ್ ಅಮೀನ್, ತಸ್ನೀನ್ ಅರಾ, ಶರ್ಪುದ್ದೀನ್ ಶೇಕ್, ಅಶೋಕ್ ಸಾಲ್ಯಾನ್, ಮೋಹನ್, ಕೇಶವ್ ಸಾಲ್ಯಾನ್ ಹೆಜಮಾಡಿ, ಸನಾ ಇಬ್ರಾಹಿಂ, ಹಸನ್ ಕೋಡಿ, ದೀಪಕ್ ಕೋಟ್ಯಾನ್ ಮತ್ತಿತರರು ಇದ್ದರು.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ

ಸಾರ್ವಜನಿಕರು ಟೋಲ್ ಪ್ರಬಂಧಕರನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಮನವಿ ಸ್ವೀಕರಿಸಿದ ಟೋಲ್ ಪ್ರಬಂಧಕ ತಿಮ್ಮಯ್ಯ ಮಾತನಾಡಿ, ಸಾಸ್ತಾನ, ಹೆಜಮಾಡಿ ಟೋಲ್ ಸಮಸ್ಯೆ ಇತ್ಯರ್ಥಕ್ಕೆ ಮುಂದಿನ ವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಆವರೆಗೆ ಸ್ಥಳೀಯರಿಗಿದ್ದ ವಿನಾಯಿತಿಯನ್ನು ಯಥಾಸ್ಥಿತಿ ಮುಂದುವರಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net