ಕೆಯ್ಯೂರು ಗ್ರಾಪಂನಿಂದ ತೆರಿಗೆ ವಸೂಲಿ ಅಭಿಯಾನ

New Project (3)
Published on

ಪುತ್ತೂರು ಗ್ರಾಮಾಂತರ: ಸರ್ಕಾರಕ್ಕೆ ಪಾವತಿಸಬೇಕಾದ ವಿವಿಧ ತೆರಿಗೆಗಳ ವಸೂಲಿಗಾಗಿ ಗುರುವಾರ ಕೆಯ್ಯೂರು ಗ್ರಾಮ ಪಂಚಾಯಿತಿ ವತಿಯಿಂದ ತೆರಿಗೆ ವಸೂಲಿ ಅಭಿಯಾನ ನಡೆಯಿತು.

ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಹಾಗೂ ಸಿಬ್ಬಂದಿ ಗ್ರಾಮದ ಬೊಳಿಕ್ಕಲ, ಕಂಚಿನಪದವು, ಪರ್ತ್ಯಡ್ಕ, ಮಾಡಾವುಕಟ್ಟೆ ಮೊದಲಾದ ಪ್ರದೇಶಗಳಿಗೆ ತೆರಳಿ ತೆರಿಗೆ ವಸೂಲಿ ಮಾಡುವುದರೊಂದಿಗೆ ತೆರಿಗೆ ಪಾವತಿಯ ಕುರಿತು ಜಾಗೃತಿ ಮೂಡಿಸಿದರು.

2 ಸಾವಿರ ರೂ.ಗೂ ಅಧಿಕ ಕುಡಿಯುವ ನೀರಿನ ಶುಲ್ಕ ಬಾಕಿ ಇರಿಸಿಕೊಂಡವರ ನೀರಿನ ಸಂಪರ್ಕ ಕಡಿತ ಮಾಡಲಾಯಿತು. ಸ್ವಚ್ಛತೆಗೆ ಹೆಚ್ಚಿನ ಗಮನ ಕೊಡುವ ನಿಟ್ಟಿನಲ್ಲಿ ಒಣಕಸ ಸಂಗ್ರಹ ಬ್ಯಾಗ್‌ಗಳನ್ನು ವಿತರಣೆ ಮಾಡಲಾಯಿತು. ಮನೆ ತೆರಿಗೆ, ಕಟ್ಟಡ ತೆರಿಗೆ, ಬಾಡಿಗೆ ಇತ್ಯಾದಿ ಸರ್ಕಾರಿ ಪಾವತಿಗಳನ್ನು ಕೂಡಲೇ ಪಂಚಾಯಿತಿಗೆ ಪಾವತಿಸಿ ಗ್ರಾಮದ ಅಭಿವೃದ್ಧಿಯಲ್ಲಿ ಸಹಕರಿಸುವಂತೆ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಗ್ರಾಮಸ್ಥರಲ್ಲಿ ವಿನಂತಿಸಿಕೊಂಡರು.

ತೆರಿಗೆ ವಸೂಲಿ ಅಭಿಯಾನ ತಂಡದಲ್ಲಿ ಗ್ರಾಪಂ ಸಿಬ್ಬಂದಿ ಮಾಲತಿ, ಧರ್ಮಣ್ಣ, ವಾಟರ್‌ಮನ್ ಗೀತಾ, ಪ್ಲಂಬರ್ ರಮೇಶ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net