

ತಾವರಗೇರಾ: ಲಾಕ್‌ಡೌನ್‌ಗೆ ಸ್ಪಂದಿಸಿರುವ ಜನ ಪಟ್ಟಣಕ್ಕೆ ತಾವೇ ದಿಗ್ಭಂದನ ವಿಧಿಸಿಕೊಂಡಿದ್ದಾರೆ. ವಿವಿಧ ಗ್ರಾಮಗಳ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಿಗೆ ಬೇಲಿ ಹಾಕಿ, ಯಾರೂ ಹೊರ ಹೋಗದಂತೆ, ಯಾರೂ ಒಳ ಬರದಂತೆ ನೋಡಿಕೊಂಡಿದ್ದಾರೆ. ಅಗತ್ಯ ಇದ್ದವರು ಹೊರ ಹೋಗುವ ಮೊದಲು ಪಟ್ಟಣದ ಹಿರಿಯರಿಗೆ ಮಾಹಿತಿ ನೀಡಬೇಕು ಎಂದು ನಿಯಮವನ್ನೂ ಹೇರಿಕೊಂಡಿದ್ದಾರೆ.
ಸಾಮಾಜಿಕ ಅಂತರ: ಕೊಪ್ಪಳ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮನೆ ಮನೆಗೆ ತರಕಾರಿ ಪೂರೈಕೆ ನಡೆದಿದ್ದು, ಜನ ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿಸುತ್ತಿದ್ದಾರೆ.