

ಮಡಿಕೇರಿ:
ಕೊಳಚೆ ಗುಂಡಿಯAತೆ ಆಗಿರುವ ಕುಶಾಲನಗರದ ಐತಿಹಾಸಿಕ ತಾವರೆಕೆರೆಗೆ ಕೊನೆಗೂ ಅಭಿವೃದ್ಧಿಯ ಕಾಲ ಕೂಡಿಬಂದಿದೆ. ಕುಶಾಲನಗರ ನಗರ ಯೋಜನಾ ಪ್ರಾಧಿಕಾರ ಮುಖಾಂತರ ಇಲ್ಲಿ ಸುಮಾರು 2.90 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ನಡೆಯಲಿದೆ. ಈ ಸಂಬAಧ ಸಣ್ಣ ನೀರಾವರಿ ಇಲಾಖೆ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಮೈಸೂರÀÄ-ಬಂಟ್ವಾಳ ರಾಷ್ಟಿçÃಯ ಹೆದ್ದಾರಿ 275ರಲ್ಲಿ ಕುಶಾಲನಗರದಿಂದ ಮಡಿಕೇರಿಗೆ ತೆರಳುವ ಮಾರ್ಗದ ಬದಿಯಲ್ಲಿ ಕುಶಾಲನಗರಕ್ಕೆ ಹೊಂದಿಕೊAಡAತೆಯೇ ತಾವರೆಕೆರೆ ಇದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ಕೆರೆಯ ತುಂಬಾ ಮೊದಲೆಲ್ಲಾ ಹೆಸರಿಗೆ ತಕ್ಕಂತೆ ಬಗೆ ಬಗೆಯ ತಾವರೆ ಹೂವುಗಳು ಯಥೇಚ್ಛವಾಗಿ ಕಾಣುವುದಕ್ಕೆ ಸಿಗುತ್ತಿತ್ತು. ಪಟ್ಟಣ ಬೆಳೆದಂತೆ ಭೂದಾಹಿಗಳು ಕೆರೆಯನ್ನು ಮೂರೂ ಕಡೆಯಿಂದಲೂ ಅತಿಕ್ರಮಿಸಿಕೊಂಡಿರುವ ಆರೋಪ ಕೇಳಿಬರುತ್ತಿದ್ದು, ದಾಖಲೆಗಳಲ್ಲಿ 4 ಎಕರೆ ವಿಸ್ತೀರ್ಣದ ಮಾಹಿತಿ ಇದ್ದರೂ ಈಗ ಕೆರೆಯ ವಿಸ್ತಾರ ಚಿಕ್ಕದಾಗಿದೆ.
ಸುತ್ತಲಿನ ಬಡಾವಣೆಗಳ ಕೊಳಚೆ ನೀರು ಚರಂಡಿಗಳ ಮುಖಾಂತರ ನೇರವಾಗಿ ಈ ಕೆರೆಗೆ ಸೇರುವುದರಿಂದ ಸದ್ಯ ಇದೊಂದು ತ್ಯಾಜ್ಯದ ಗುಂಡಿಯಾಗಿಯೂ ಬದಲಾಗಿದೆ. ಭಾರಿ ಪ್ರಮಾಣದಲ್ಲಿ ತ್ಯಾಜ್ಯ ನೀರು ಸೇರ್ಪಡೆ ಆಗುತ್ತಿರುವುದರಿಂದ ಈ ಪ್ರದೇಶದಲ್ಲಿ ಸೊಳ್ಳೆ ಹಾವಳಿ ವಿಪರೀತವಾಗಿದ್ದು, ಹಗಲಿನಲ್ಲೂ ಓಡಾಡಲೂ ಅಸಾಧ್ಯದ ಸ್ಥಿತಿ ಇದೆ. ಇದೀಗ ಈ ಕೆರೆಯ ಕೊಳಚೆ ನೀರಿನಲ್ಲಿ ತಾವರೆ ಹೂವಿನ ಬದಲು ಕಳೆ ಸಸ್ಯಗಳ ಸಾಮ್ರಾಜ್ಯ ಎದ್ದು ನಿಂತಿದೆ. ಈ ದೃಶ್ಯ ನೋಡಲು ಸುಂದರವಾಗಿ ಕಂಡುಬAದರೂ ಈ ಗಿಡಗಳು ಜೀವ ವೈವಿಧ್ಯ ವ್ಯವಸ್ಥೆಗೆ ಮಾರಕವಾಗಿದೆ.
ಕುಶಾಲನಗರ ಪಟ್ಟಣದ ಪಾಲಿಗೆ ಮಹತ್ವದ್ದಾಗಿರುವ ಈ ಕೆರೆಯನ್ನು ಉಳಿಸಿಕೊಳ್ಳುವುದರ ಜತೆಗೆ ಆಕರ್ಷಣೀಯ ಕೇಂದ್ರವಾಗಿ ರೂಪಿಸಲು ಕುಶಾಲನಗರ ನಗರ ಯೋಜನಾ ಪ್ರಾಧಿಕಾರ ಮುಂದಾಗಿದೆ. ಈ ಸಂಬAಧ ಪೂರಕ ಪ್ರಕ್ರಿಯೆಗಳು ವೇಗವಾಗಿ ನಡೆಯುತ್ತಿದೆ. ಒಟ್ಟು 2.90 ಕೋಟಿ ರೂ.ಗಳ ಈ ಯೋಜನೆ ಕಾರ್ಯಗತಗೊಳಿಸಲು ಸಣ್ಣ ನೀರಾವರಿ ಇಲಾಖೆ ಈಗಾಗಲೇ ತನ್ನ ಒಪ್ಪಿಗೆ ಕೊಟ್ಟಿದೆ. ನಗರಾಭಿವೃದ್ಧಿ ಇಲಾಖೆ ಮೂಲಕ ಯೋಜನೆ ಅನುಷ್ಠಾನಗೊಳ್ಳುವುದಷ್ಟೇ ಬಾಕಿ ಇದೆ.
ತಾವರೆಕೆರೆಯ ಉದ್ದೇಶಿತ ಅಭಿವೃದ್ಧಿ ಯೋಜನೆಯ ಪ್ರಕಾರ ಕೆರೆ ಅತಿಕ್ರಮಣವನ್ನು ಮೊದಲು ತೆರವು ಮಾಡಲಾಗುವುದು. ಇದರ ಜತೆಗೆ ಕೆರೆಯ ಹೂಳು ತೆಗೆಯುವುದು, ಕೆರೆಗೆ ತಡೆಗೋಡೆ, ಕೆರೆಯ ಸುತ್ತ ಪಾದಚಾರಿ ಮಾರ್ಗ ನಿರ್ಮಾಣ, ವಿಶ್ರಾಂತಿ ಕುರ್ಚಿಗಳ ಅಳವಡಿಕೆ, ಮಕ್ಕಳಿಗಾಗಿ ಆಟದ ಪಾರ್ಕ್, ವೃದ್ದರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಾಕಿಂಗ್ ಪಾಥ್, ಕೊಳಚೆ ನೀರು ಸೇರದಂತೆ ಸೂಕ್ತ ವ್ಯವಸ್ಥೆ.. ಮತ್ತಿತರ ಕಾಮಗಾರಿಗಳನ್ನು ಯೋಜಿಸಲಾಗಿದೆ.
ತಾವರೆಕೆರೆಗೆ ಕೊಳಚೆ ನೀರು ಸೇರದಂತೆ ಮೊದಲು ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹ. ಇಂಗುಗುAಡಿಗಳ ನಿರ್ಮಾಣ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಸ್ಥಾಪನೆ ಮೂಲಕ ಸಮಸ್ಯೆಗೆ ಕಡಿವಾಣ ಹಾಕಬಹುದು. ಇಲ್ಲದಿದ್ದರೆ ಈ ಕೆರೆಯನ್ನು ಎಷ್ಟೇ ಅಭಿವೃದ್ಧಿ ಮಾಡಿದರೂ ಪ್ರಯೋಜನ ಇಲ್ಲ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ತಾವರೆಕೆರೆ ಅಭಿವೃದ್ಧಿಯನ್ನು ಪ್ರವಾಸೋದ್ಯಮ ಇಲಾಖೆ ಮೂಲಕ ಮಾಡಿಸಲು ಕುಶಾಲನಗರ ನಗರ ಯೋಜನಾ ಪ್ರಾಧಿಕಾರದದಿಂದ ಪ್ರಯತ್ನ ನಡೆದಿತ್ತು. ಅಂದು ಪ್ರವಾಸೋದ್ಯಮ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ 20 ಲಕ್ಷ ರೂ. ಅನುದಾನವನ್ನೂ ಮೊದಲ ಕಂತಿನಲ್ಲಿ ಬಿಡುಗಡೆ ಮಾಡಿದ್ದರು. ಆದರೆ ತಾವರೆಕೆರೆಗೆ ಸಂಪರ್ಕ ರಸ್ತೆ ಇಲ್ಲ ಎನ್ನುವ ಕಾರಣ ನೀಡಿ ಪ್ರವಾಸೋದ್ಯಮ ಇಲಾಖೆ ಈ ಅನುದಾನವನ್ನು ನಾಪೋಕ್ಲು ಸಮೀಪದ ಚೇಲಾವರ ಜಲಪಾತ ಅಭಿವೃದ್ಧಿಗೆ ಬಳಸಿತ್ತು.
ಕುಶಾಲನಗರದ ಐತಿಹಾಸಿಕ ಮಹತ್ವದ ತಾವರೆಕೆರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿ.ಜಿ. ಮಂಜುನಾಥ್ ಗುಂಡೂರಾವ್ ಕುಶಾಲನಗರ ಯೋಜನಾ ಪ್ರಾಕಾರದ ಅಧ್ಯಕ್ಷರಾಗಿದ್ದ ವೇಳೆ ಯೋಜನೆಯೊಂದನ್ನು ರೂಪಿಸಲಾಗಿತ್ತು. 1 ಕೋಟಿ 10 ಲಕ್ಷದ ಅಂದಾಜು ವೆಚ್ಚದ ಈ ಯೋಜನೆ ಪ್ರಕಾರ ಕೆರೆಯ ಸಮಗ್ರ ಅಭಿವೃದ್ಧಿ ಜತೆಗೆ ಇದನ್ನೊಂದು ಪ್ರವಾಸಿ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ನೀಲನಕಾಶೆ ತಯಾರಿಸಲಾಗಿತ್ತು. ಕೆರೆ ಅಭಿವೃದ್ಧಿಗೆ ಬಳಕೆ ಮಾಡಲಾಗುವ ಮೊತ್ತದಲ್ಲಿ 50 ಲಕ್ಷ ರೂ. ಯೋಜನಾ ಪ್ರಾಕಾರವೇ ಭರಿಸಲು ನಿರ್ಧರಿಸಲಾಗಿತ್ತು. ಇನ್ನುಳಿದ 60 ಲಕ್ಷ ರೂ. ಪ್ರವಾಸೋದ್ಯಮ ಇಲಾಖೆಯ ಅನುದಾನದಿಂದ ಬಳಸಿಕೊಳ್ಳುವ ಚಿಂತನೆ ನಡೆದಿತ್ತು.
ಕುಶಾಲನಗರದ ಹೆಮ್ಮೆಯ ಹೆಗ್ಗುರುತಾದ ತಾವರೆಕೆರೆಯನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೆರೆಯ ಅಭಿವೃಧ್ಧಿಗಾಗಿ 2.90 ಕೋಟಿ ರೂ ವೆಚ್ಚದ ಯೋಜನೆ ರೂಪಿಸಲಾಗಿದೆ. ಈ ಯೋಜನೆಗೆ ಸಣ್ಣ ನೀರಾವರಿ ಇಲಾಖೆ ಈಗಾಗಲೇ ಒಪ್ಪಿಗೆ ಕೊಟ್ಟಿದೆ. ಉಳಿದ ವ್ಯವಸ್ಥೆಗಳು ನಮ್ಮ ಇಲಾಖೆ ಮೂಲಕ ಆಗಬೇಕಿದ್ದು, ಪ್ರಕ್ರಿಯೆ ಚುರುಕಾಗಿ ನಡೆಯುತ್ತಿದೆ.
ಪ್ರಮೋದ್ ಮುತ್ತಪ್ಪ, ಅಧ್ಯಕ್ಷ, ಕುಶಾಲನಗರ ನಗರ ಯೋಜನಾ ಪ್ರಾಧಿಕಾರ
ತಾವರೆಕೆರೆಯಲ್ಲಿ ಸುಸಜ್ಜಿತ ಪಾರ್ಕ್ ಜತೆಗೆ ಕುಶಾಲನಗರದವರೇ ಆದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಪ್ರತಿಮೆ ಸ್ಥಾಪಿಸುವ ಚಿಂತನೆ ಹೊಂದಲಾಗಿತ್ತು. ಅಂದು ಕೊಂಡAತೆ ಎಲ್ಲಾ ಕೆಲಸವೂ ನಡೆದಿದ್ದÀಲ್ಲಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ತಾವರೆಕೆರೆ ಕೂಡ ದೊಡ್ಡ ಕೊಡುಗೆ ನೀಡುವುದರಲ್ಲಿತ್ತು. ಆದರೆ ನಾವು ಕಷ್ಟಪಟ್ಟು ತಂದ ಅನುದಾನವನ್ನು ಪ್ರವಾಸೋದ್ಯಮ ಇಲಾಖೆ ಬೇರೆ ಕಡೆ ಬಳಸಿಕೊಂಡಿತ್ತು.
ಬಿ.ಜಿ. ಮಂಜುನಾಥ್ ಗುಂಡೂರಾವ್, ಮಾಜಿ ಅಧ್ಯಕ್ಷ, ಕುಶಾಲನಗರ ನಗರ ಯೋಜನಾ ಪ್ರಾಧಿಕಾರ
ಕುಶಾಲನಗರ ಸೇರಿದಂತೆ ಜಿಲ್ಲೆಯಾದ್ಯಂತ ಕೆರೆಗಳ ಒತ್ತುವರಿ ಪ್ರಕರಣಗಳು ನಡೆಯುತ್ತಲೇ ಇದೆ. ತಾವರೆಕೆರೆಯನ್ನು ಅಭಿವೃದ್ಧಿಪಡಿಸುವ ನಗರ ಯೋಜನಾ ಪ್ರಾಧಿಕಾರದ ಚಿಂತನೆ ಸ್ವಾಗತಾರ್ಹ. ಇದರಿಂದ ಒತ್ತುವರಿಗೆ ಕಡಿವಾಣ ಹಾಕಬಹುದು. ಕೊಳಚೆ ನೀರು ಸೇರುವುದನ್ನೂ ತಡೆದಂತಾಗುತ್ತದೆ.
- ಹೆಚ್.ಎಸ್. ಅಶೋಕ, ಮಾಜಿ ಅಧ್ಯಕ್ಷ, ಜಿ.ಪಂ., ಕೊಡಗು