

ತಾವರಗೇರಾ: ಗ್ರಾಮೀಣ ಕ್ರೀಡಾಕೂಟ ಇಂದು ಪ್ರಾಮುಖ್ಯತೆ ಕಳೆದುಕೊಂಡಿದ್ದು, ಈ ಅಪವಾದ ತಪ್ಪಿಸಿ, ಆಟೋಟಗಳನ್ನು ಮುಂದುವರಿಸಲು ಎಲ್ಲರೂ ಅಣಿಯಾಗಬೇಕು ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಖೋಖೋ ತರಬೇತುದಾರ ಎ.ಎನ್.ಯತಿರಾಜು ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಶಶಿಧರಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ 2019-20 ನೇ ಸಾಲಿನ ಗ್ರಾಮೀಣ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಸಿಂಗ್ರಾಣಿ ಕಲ್ಲು ಎತ್ತುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಗಳು ಮಾನಸಿಕ, ದೈಹಿಕವಾಗಿ ಬೆಳವಣಿಗೆಗೆ ಪೂರಕವಾಗುತ್ತದೆ ಪಾಲಕರು ತಮ್ಮ ಮಕ್ಕಳನ್ನು ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ತಾವರಗೇರಾ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶರಣಪ್ಪ ಐಲಿ, ಸಸಿಗೆ ನೀರು ಹಾಕುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಚಾರ್ಯ ಆರ್.ಜೆ. ಅಂಬಿಗೇರ ಮತ್ತು ಉಪನ್ಯಾಸಕ ಎಸ್.ಎಸ್.ಗುಡದೂರ ಮಾತನಾಡಿದರು.
ಕಿರಣ ಕುಮಾರ ಮೋದಿಕರ್, ಶರಣಬಸವ ಕಳ್ಳೇರ್, ಸಂಸ್ಥೆಯ ನಿರ್ದೇಶಕರಾದ ಮಲ್ಲಪ್ಪ ಗಲಗಲಿ, ಮಲ್ಲಿಕಾರ್ಜುನಗೌಡ ವಿಠಲಾಪೂರ, ಶೇಖರಪ್ಪ ನಾಲತವಾಡ, ಪಂಪಣ್ಣ ಚಿಟ್ಟಿ, ಆಡಾಳಿತಾಧಿಕಾರಿ ಬಸನಗೌಡ ಪೊಲೀಸ್ ಪಾಟೀಲ್, ಮುಖ್ಯ ಗುರು ಪ್ರಭಾಕರ ಅವರಡ್ಡಿ ಇದ್ದರು.
ಸಂಸ್ಥೆಯ ಅಧ್ಯಕ್ಷ ಚಂದ್ರ ಶೇಖರಗೌಡ ಪೊಲೀಸ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕಿ ಸುಜಾತ ಹಿರೇಮಠ ಸ್ವಾಗತಿಸಿದರು. ಅರ್ಚನಾ ಬುಜರಕರ್ ನಿರೂಪಿಸಿದರು. ಅಯ್ಯಣ್ಣ ವಂದಿಸಿದರು.