ದಾಳಿಂಬೆ ತೋಟಕ್ಕೆ ಬೆಂಕಿ ಬಿದ್ದು ಭಸ್ಮವಾದ ಗಿಡಗಳು

26042020 Tavaragera plantation Fire
Published on

ತಾವರಗೇರಾ: ಪಟ್ಟಣದ ಪ್ರಗತಿ ಪರ ರೈತ ಶಿವಪ್ಪ ತಾಳಿಕೋಟಿ ಎಂಬುವರ ದಾಳಿಂಬೆ ತೋಟಕ್ಕೆ ಭಾನುವಾರ ಬೆಳಗಿನ ಜಾವ ಬೆಂಕಿ ಹತ್ತಿ 200 ದಾಳಿಂಬೆ ಗಿಡ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.

ರೈತ ಶಿವಪ್ಪ ಭಾನುವಾರ ಬೆಳಗ್ಗೆ ತೋಟಕ್ಕೆ ಹೋದಾಗ ದಾಳಿಂಬೆ ಗಿಡಗಳಿಗೆ ಬೆಂಕಿ ಹತ್ತಿರುವುದು ತಿಳಿಸಿದಿದೆ. ಸುತ್ತಲಿನ ರೈತರ ಸಹಾಯದಿಂದ ಸಾಧ್ಯವಾದಷ್ಟು ಬೆಂಕಿ ನಂದಿಸಿದ್ದಾರೆ. ನಂತರ ಸ್ಥಳೀಯ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿದ ನೀಡಿದ ಪೊಲೀಸರು, ಕಂದಾಯ ಇಲಾಖೆಯವರು ಪರಿಶೀಲನೆ ನಡೆಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net