ಕೇಂದ್ರದಿಂದ ಕಂಪನಿ ಸರ್ಕಾರ ಸ್ಥಾಪನೆ; ಕೋಡಿಹಳ್ಳಿ ಚಂದ್ರಶೇಖರ ಆರೋಪ

21092021 Tavaragera Kodihalli Chandrashekhar
Published on

ತಾವರಗೇರಾ: ಸರ್ಕಾರ ರೈತರಿಗೆ ಮಾರಕವಾದ ಕಾನೂನು ಜಾರಿಗೆ ತಂದಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು. ವಿಮಾನ, ರೈಲ್ವೆ ನಿಲ್ದಾಣ ಹಾಗೂ ಬಂದರುಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ನೀಡುವ ಮೂಲಕ ಕೇಂದ್ರ ಸರ್ಕಾರ ಕಂಪನಿ ಸರ್ಕಾರ ಸ್ಥಾಪನೆ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಜೆ ಕಾರ್ತಿಕ್, ಜಿಲ್ಲಾ ಅಧ್ಯಕ್ಷ ನಜೀರಸಾಬ್ ಮೂಲಿಮನಿ, ತಾಲೂಕು ಅಧ್ಯಕ್ಷ ನಾಗರಾಜ ಇಟಗಿ, ಭಟ್ಟರಹಳ್ಳಿ ಭೈರೇಗೌಡ, ಹನುಮಂತಪ್ಪ ಹೊಳೆಯಾಚೆ, ದಲಿತ ಮುಖಂಡ ಆನಂದ ಭಂಡಾರಿ, ಮಹಿಳಾ ಘಟಕದ ಪದಾಧಿಕಾರಿ ಮಹಾಂತಮ್ಮ ಪಾಟೀಲ್, ರಾಜಾನಾಯಕ್, ಯಮನೂರಪ್ಪ ಬಿಳೇಗುಡ್ಡ, ಅಮರೇಶ ಛಲವಾದಿ, ಪರಶುರಾಮ ಭೋವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net