ರಸ್ತೆಗೆ ಟೊಮ್ಯಾಟೊ ಸುರಿದು ಪ್ರತಿಭಟನೆ

Tevaragera Tomato on Road
ಟೊಮ್ಯಾಟೊ ಬೆಲೆ ಕುಸಿತದಿಂದ ಆಕ್ರೋಶಗೊಂಡ ರೈತರು ತಾವರಗೇರಾದಲ್ಲಿ ಹಣ್ಣುಗಳನ್ನು ರಸ್ತೆಗೆ ಎಸೆದರು.
Published on

ತಾವರಗೇರಾ: ಸಮರ್ಪಕ ಬೆಲೆ ಇಲ್ಲ ಎಂದು ಆಕ್ರೋಶಗೊಂಡ ರೈತರು ಗುರುವಾರ ಪಟ್ಟಣದಲ್ಲಿ ರಸ್ತೆ ಮೇಲೆ ಟೊಮ್ಯಾಟೊ ಚೆಲ್ಲಿ ಪ್ರತಿಭಟನೆ ನಡೆಸಿದರು.

ವಾರದ ತರಕಾರಿ ಮಾರುಕಟ್ಟೆಯಲ್ಲಿ ಖರೀದಿದಾರರು 30 ಕಿಲೋ ಟೊಮ್ಯಾಟೊ ಪೆಟ್ಟಿಗೆಗೆ ಕೇವಲ 10 ರೂ. ಕೇಳಿದ್ದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದರು. ರೈತರಾದ ಶೇಖರಪ್ಪ ರಡ್ಡಿ ವಿಠಲಾಪೂರ, ಭೀಮಸಿಂಗ್, ಬಾಳಪ್ಪ, ಶಾಮಸುಂದರ ದಂಡಿನ , ಪ್ರತಾಪಸಿಂಗ್, ಯಾಸಿನ್, ಶಂಕರಸಿಂಗ್ ಮಾತನಾಡಿ ಸರ್ಕಾರ ರೈತರನ್ನು ಕಡೆಗಣಿಸಿದೆ. ಜನ ಪ್ರತಿನಿಧಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net