ಲಾಕ್‌ಡೌನ್ ಗೆ ಸ್ಪಂದಿಸದವರ ವಿರುದ್ಧ ಕಾನೂನು ಕ್ರಮ

22042020 Tavaragera PSI Geetanjali Shinde
Published on

ತಾವರಗೇರಾ ಪಿಎಸ್‌ಐ ಗೀತಾಂಜಲಿ ಶಿಂಧೆ ಎಚ್ಚರಿಕೆ

ತಾವರಗೇರಾ: ಪಟ್ಟಣದ ಕಿರಾಣಿ ವರ್ತಕರು ಸೇರಿ ಇನ್ನಿತರ ವ್ಯಾಪಾರ ವಹಿವಾಟು ಮಾಡುವವರು ಸರಿಯಾದ ರೀತಿಯಲ್ಲಿ ಲಾಕ್‌ಡೌನ್ ಗೆ ಸ್ಪಂದಿಸುತ್ತಿಲ್ಲ. ಅಂಥವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪಿಎಸ್‌ಐ ಗೀತಾಂಜಲಿ ಶಿಂಧೆ ಹೇಳಿದರು.

ಕೆಲವರು ನೆಪ ಮಾತ್ರಕ್ಕೆ ಅಂಗಡಿ ಬಾಗಿಲನ್ನು ಅರ್ಧ ಮುಚ್ಚಿ ಮತ್ತು ಹಿಂದಿನ ಬಾಗಿಲಿನಿಂದ ವ್ಯಾಪಾರ ವಹಿವಾಟು ಮಾಡುತ್ತಿರುವುದು ಪಟ್ಟಣದಲ್ಲಿ ವ್ಯಾಪಕವಾಗಿ ಕಂಡು ಬಂದಿದ್ದು, ಪೊಲೀಸ್ ಸಿಬ್ಬಂದಿ ಕಂಡಾಗ ಮಾತ್ರ ಬಾಗಿಲು ಮುಚ್ಚುತ್ತಾರೆ. ಬೇರೆ ಕಡೆ ಹೋಗುತ್ತಿದ್ದಂತೆ ಮತ್ತೆ ಬಾಗಿಲು ತೆರೆದು ವ್ಯಾಪಾರ ಮಾಡುತ್ತ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಕೆಲವರು ದಿನಸಿ ವಸ್ತುಗಳಿಗೆ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂದು ಸಾರ್ವನಿಕರಿಂದ ದೂರು ಕೇಳಿ ಬಂದಿದ್ದು ಅಂಥವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net