ಹಾಗಲದಾಳ ಗ್ರಾಮದಲ್ಲಿ ಡೆಂಘೆ ಜ್ವರದ ಹಾವಳಿ

Dengue
Published on

ತಾವರಗೇರಾ: ಸಮೀಪದ ಹಾಗಲದಾಳ ಗ್ರಾಮದಲ್ಲಿ ಕಳೆದ ಒಂದು ವಾರದಲ್ಲಿ 50ಕ್ಕೂ ಹೆಚ್ಚು ಜನರು ಡೆಂೆ ಮತ್ತು ಮಲೇರಿಯಾ ಜ್ವರದಿಂದ ಬಳಲುತ್ತಿದ್ದಾರೆ.

ಚಿಕಿತ್ಸೆಗಾ ತಾವರಗೇರಾಕ್ಕೆ ತೆರಳಬೇಕಾಗಿದ್ದು, ಗ್ರಾಮಕ್ಕೆ ಸಮರ್ಪಕ ಬಸ್ ಸೌಲಭ್ಯವಿಲ್ಲದ ಕಾರಣ ಪಟ್ಟಣಕ್ಕೆ ತೆರಳಲು ತೊಂದರೆ ಅನುಭವಿಸುವಂತಾಗಿದೆ. ಸ್ವಚ್ಛತೆ ಇಲ್ಲದಿರುವುದರಿಂದ ರೋಗಗಳು ಉಲ್ಬಣ ಗೊಳ್ಳುವ ಲಕ್ಷಣವಿದೆ. ಗ್ರಾಮವು ಜುಮಲಾಪುರ ಗ್ರಾಪಂ ವ್ಯಾಪ್ತಿಗೆ ಸೇರಿದ್ದು, ಎರಡು ದಿನಗಳ ಹಿಂದೆ ಫಾಗಿಂಗ್ ಮಾಡಲಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗೆ ಸ್ಪಂದಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಾತಾವರಣ ಬದಲಾವಣೆಯಿಂದ ಜನರಿಗೆ ರೋಗ ಕಾಣಿಸಿಕೊಂಡಿದೆ. ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದು, ವೈದ್ಯರನ್ನು ಗ್ರಾಮಕ್ಕೆ ಕಳಿಸುವ ವ್ಯವಸ್ಥೆ ಮಾಡಿದೆ. ಅಲ್ಲಿಯೇ ತಾತ್ಕಾಲಿಕ ಆಸ್ಪತ್ರೆ ತೆರೆಯಲು ಸೂಚಿಸಿದೆ.| ಡಾ.ಆನಂದ ಗೋಟೂರ್, ಕುಷ್ಟಗಿ ತಾಲೂಕು ವೈದ್ಯಾಧಿಕಾರಿಗ್ರಾಮದ ಸ್ವಚ್ಛತೆಗಾಗಿ ಫಾಗಿಂಗ್ ಮಾಡಲಾಗಿದೆ. ಮೇಲಧಿಕಾರಿಗಳಿಗೆ ಈ ಕುರಿತು ತಿಳಸಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಗ್ರಾಮಕ್ಕೆ ಶೀಘ್ರ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.| ಶಂಕರ ಚವ್ಹಾಣ್ ಪಿಡಿಒ ಜುಮಲಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net