ತಾವರಗೇರಾ ಮಾರುಕಟ್ಟೆಯಲ್ಲಿ ಜನಜಂಗುಳಿ

16052021 Tavaragera Market crowd
Published on

ತಾವರಗೇರಾ: ಜಿಲ್ಲಾಡಳಿತ ಮೇ 17ರಿಂದ 21ರ ವರೆಗೆ ಸಂಪೂರ್ಣ ಲಾಕ್‌ಡೌನ್ ೋಷಿಸಿದ ಹಿನ್ನೆಲೆ ಭಾನುವಾರ ಸ್ಥಳೀಯ ಮಾರುಕಟ್ಟೆಯಲ್ಲಿ ಜನ ಜಂಗುಳಿ ಕಂಡುಬಂತು. ಕಿರಾಣಿ ಹಾಗೂ ತರಕಾರಿ ಖರೀದಿಸಲು ಬೆಳಗ್ಗೆ ಜನರು ಮುಗಿಬಿದ್ದರು. ಬೆಳಗ್ಗೆ 6ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು. ಖರೀದಿಗೆ ಬಂದ ಜನರು ಪರಸ್ಪರ ಅಂತರ ಹಾಗೂ ಮಾಸ್ಕ್ ಧರಿಸದಿರುವುದು ಕಂಡುಬಂತು. ಸಂಪೂರ್ಣ ಲಾಕ್‌ಡೌನ್ ಜಾರಿ ಬಗ್ಗೆ ಪೊಲೀಸರು ಧ್ವನಿವರ್ಧಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net