ತಾವರಗೇರಾದ ಆರ್‌ಎಸ್‌ಕೆಗೆ ತಹಸೀಲ್ದಾರ್ ಭೇಟಿ; ರೈತರಿಗೆ ಸಮಸ್ಯೆಯಾಗದಂತೆ ಬೀಜ ವಿತರಣೆಗೆ ಸೂಚನೆ

200622 Tavaragera Tahasildar Visit Farmers Contact Center
ತಾವರಗೇರಾ ರೈತ ಸಂಪರ್ಕ ಕೇಂದ್ರಕ್ಕೆ ತಹಸೀಲ್ದಾರ್ ಎಂ.ಸಿದ್ಧೇಶ ಭೇಟಿ ನೀಡಿ ದಾಖಲೆ ಪರಿಶೀಲಿಸಿದರು.
Published on

ತಾವರಗೇರಾ: ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಕುಷ್ಟಗಿ ತಹಸೀಲ್ದಾರ್ ಎಂ.ಸಿದ್ಧೇಶ ಸೋಮವಾರ ಭೇಟಿ ನೀಡಿ ಬಿತ್ತನೆ ಬೀಜ ದಾಸ್ತಾನು ಮಾಹಿತಿ ಪಡೆದರು. ಆರ್‌ಎಸ್‌ಕೆ ಸಿಬ್ಬಂದಿ ಸರಿಯಾಗಿ ವರ್ತಿಸಲ್ಲ. ರೈತರು ಕೇಳಿದ ಪ್ರಶ್ನೆಗಳಿಗೆ ಹಾರಿಕೆ ಉತ್ತರ ನೀಡುತ್ತಾರೆ. ಕರೆ ಮಾಡಿದರೆ ಫೋನ್ ತೆಗೆಯಲ್ಲ. ಇತ್ತೀಚೆಗೆ ಕೃಷಿ ಅಧಿಕಾರಿ ನಿವೃತ್ತಿ ಹೊಂದಿದ್ದು, ಸಿಬ್ಬಂದಿ ತಾವೇ ಅಧಿಕಾರಿಗಳೆಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ರೈತರಾದ ವಿರೂಪಾಕ್ಷಪ್ಪ, ಶಿವಪ್ಪ, ಪ್ರಮೋದಗೌಡ ಇತರರು ಆಕ್ರೋಶ ವ್ಯಕ್ತಪಡಿಸಿದರು. ರೈತರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಸಿಬ್ಬಂದಿಗೆ ತಹಸೀಲ್ದಾರ್ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net