ಕಾಂಗ್ರೆಸ್ ಗೆಲುವು ಖಚಿತ - ಸತೀಶ್ ಜಾರಕಿಹೊಳಿ

Satish Zarakiholi at Tavaragera
ತಾವರಗೇರಾ ಪಟ್ಟಣದ ಹೆಲಿಪ್ಯಾಡ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಬೆಳಗಾವಿ ಲೋಕಸಭಾ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮಾತನಾಡಿದರು.
Published on

ತಾವರಗೇರಾ: ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ. ನಾನೂ ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ಸ್ಪರ್ಧಿಸಿದ್ದು, ಪಕ್ಷದ ಪ್ರಚಾರಕ್ಕಾಗಿ ಮಸ್ಕಿಗೆ ಬಂದಿದ್ದೇನೆ. ನಮಗೆ ಚುನಾವಣೆಗಿಂತ ಪಕ್ಷದ ಗೆಲವು ಮುಖ್ಯ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಚುನಾವಣೆಗೆ ನಿಲ್ಲದಿದ್ದರೆ ಮೂರು ಕ್ಷೇತ್ರಗಳಲ್ಲಿ ಬಿಟ್ಟೂಬಿಡದೆ ಪ್ರಚಾರ ಮಾಡುತ್ತಿದ್ದೆ. ಆದರೂ, ಬಸನಗೌಡರು ಅತಿ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗುತ್ತಾರೆ ಎಂದ ಅವರು, ಸಿಡಿ ಲೇಡಿ ಪ್ರಕರಣದಿಂದ ಕಾಂಗ್ರೆಸ್-ಬಿಜೆಪಿ ಮೇಲೆ ಯಾವುದೆ ಪರಿಣಾಮ ಉಂಟಾಗುವುದಿಲ್ಲ ಎಂದರು. ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕಾಂಗ್ರೆಸ್ ಮುಖಂಡರಾದ ದೊಡ್ಡಬಸವನಗೌಡ ಬಯ್ಯಪೂರ, ರಮೇಶ ನಾಯಕ, ಹನುಮೇಶ ನಾಯಕ, ಬಸನಗೌಡ ಮಾಲಿಪಾಟೀಲ್, ಲಿಂಗರಾಜ ಹಂಚಿನಾಳ, ಪಪಂ ಅಧ್ಯಕ್ಷ ವಿಕ್ರಮ್ ರಾಯ್ಕರ್, ನಾರಾಯಣಗೌಡ ಮೆದಿಕೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net