ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿ ಸೀಲ್‌ಡೌನ್

Tavaragera Sealdown
ತಾವರಗೇರಾದ ಅಂಬೇಡ್ಕರ್ ವೃತ್ತದಲ್ಲಿರುವ ವಾಣಿಜ್ಯ ಮಳಿಗೆಗಳನ್ನು ಬಂದ್ ಮಾಡಿರುವುದು.
Published on

ತಾವರಗೇರಾ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಉದ್ಯೋಗಿಗೆ ಕೋವಿಡ್ 19 ದೃಢಪಟ್ಟಿದ್ದರಿಂದ ಆಸ್ಪತ್ರೆ ಸುತ್ತ ನೂರು ಮೀಟರ್ ಸ್ಥಳವನ್ನು ಸೀಲ್‌ಡೌನ್ ಮಾಡಲಾಗಿದೆ. ಕುಷ್ಟಗಿ ತಹಸೀಲ್ದಾರ್ ಸಿದ್ದೇಶ್, ತಾಲೂಕ ಆಡಳಿತ ವೈದ್ಯಾಧಿಕಾರಿ ಆನಂದ್ ಗೋಟೂರ ಭೇಟಿ ನೀಡಿ, ಕಟ್ಟಡ ಮತ್ತು ಸಿಬ್ಬಂದಿ ವಸತಿ ಗೃಹಗಳಿಗೆ ಸ್ಯಾನಿಟೈಸ ಮಾಡುವಂತೆ ಮತ್ತು 42 ಸಿಬ್ಬಂದಿಯ ಗಂಟಲು ದ್ರವ ತೆಗೆದು ಪರೀಕ್ಷೆಗೆ ಕಳಿಸಲು ಸೂಚಿಸಿದರು.

ಸೀಲ್‌ಡೌನ್ ಪರಿಣಾಮ ಅಂಬೇಡ್ಕರ್ ವೃತ್ತದ ಸುತ್ತಲಿನ ವಾಣಿಜ್ಯ ಮಳಿಗೆಗಳನ್ನು ಬಂದ್ ಮಾಡಲಾಗಿದೆ. ಇದೇ ವ್ಯಾಪ್ತಿ ಪೊಲೀಸ್ ಠಾಣೆ ಗೇಟನ್ನು ಸೀಲ್‌ಡೌನ್ ಮಾಡಲಾಗಿದೆ. ಪಿಎಸ್‌ಐ ಗೀತಾಂಜಲಿ ಶಿಂಧೆ, ಪಪಂ ಆರೋಗ್ಯ ಅಧಿಕಾರಿ ಪ್ರಾಣೇಶ ಬಳ್ಳಾರಿ, ಕಂದಾಯ ಇಲಾಖೆಯ ಸೂರ್ಯಕಾಂತ ನಾಯಕ್, ಮೈತ್ರಾ ಹುನಗುಂದ, ಡಾ. ಕಾವೇರಿ ಶಾವಿ, ಡಾ. ಕೃತಿ ಮತ್ತು ಡಾ. ಪ್ರಶಾಂತ ತಾಳಿಕೋಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net