ನೆಟವರ್ಕ್ ಸಮಸ್ಯೆಯಿಂದ ಕೆಲಸದಲ್ಲಿ ವ್ಯತ್ಯಯ; ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿರುವ ಜನ

Network problem
Published on

ತಾವರಗೇರಾ: ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಸರ್ಕಾರಿ ಕಚೇರಿಗಳ ಕೆಲಸದಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದಾಗಿ ಜನರು ಕಚೇರಿಗಳಿಗೆ ಅಲೆದಾಡುವಂತಾಗಿದೆ.

ಪಟ್ಟಣ ಪಂಚಾಯಿತಿ, ನಾಡ ಕಚೇರಿ, ಅಂಚೆ ಕಚೇರಿ ಸೇರಿದಂತೆ ಇತರ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಬಿಎಸ್‌ಎನ್‌ಎಲ್ ಅಂತರ್ಜಾಲ ಸಂಪರ್ಕ ಇದೆ. ಲಾಕ್‌ಡೌನ್‌ನಿಂದಾಗಿ ಸರ್ಕಾರಿ ಕಚೇರಿ ಕೆಲಸ ಕಾರ್ಯಗಳು ಬಹುತೇಕ ಸ್ಥಗಿತವಾಗಿದ್ದವು. ಲಾಕ್‌ಡೌನ್ ಭಾಹಶಃ ಸಡಿಲಿಕೆಯಿಂದಾಗಿ ಜನರು ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಬರುತ್ತಿದ್ದಾರೆ. ಆದರೆ, ನೆಟ್‌ವರ್ಕ್ ಸಮಸ್ಯೆ ಜನರನ್ನು ಹೈರಾಣಾಗಿಸಿದೆ.

ಕಂದಾಯ ಇಲಾಖೆಯ ಎಲ್ಲ ಕೆಲಸಗಳು ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಅವಲಂಭಿಸಿವೆ. ಕಳೆದ ಒಂದು ವಾರದಿಂದ ನೆಟ್‌ವರ್ಕ್ ಸಮಸ್ಯೆ ಇದೆ. ದೂರು ನೀಡಲು ಬಿಎಸ್‌ಎನ್‌ಎಲ್ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದಾಗಿ ಕಚೇರಿಯ ಕೆಲಸಗಳಲ್ಲಿ ವಿಳಂಬ ವಾಗುತ್ತಿದೆ.| ಸೂರ್ಯಕಾಂತ, ನಾಡ ಕಾರ್ಯಾಲಯದ ಪ್ರಥಮ ದರ್ಜೆ ಸಹಾಯಕ ತಾವರಗೇರಾಕುಷ್ಟಗಿ ಬಿಎಸ್‌ಎನ್‌ಎಲ್ ಕಚೇರಿಯವರು ಒಎಫ್‌ಸಿ ಸಮಸ್ಯೆ ಇದೆ ಎಂದು ತಿಳಿಸಿದ್ದರು. ದುರಸ್ತಿಯಾಗಿದ್ದರೂ ನೆಟ್‌ವರ್ಕ್ ಸಮಸ್ಯೆ ಮುಂದುವರಿದಿದೆ.| ಚನ್ನಬಸವ ಪುರ ನೆಮ್ಮದಿ ಕೇಂದ್ರದ ಮುಖ್ಯಸ್ಥ ತಾವರಗೇರಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net