ದೇವದಾಸಿ ಪದ್ಧತಿ ನಿರ್ಮೂಲನೆಯಾಗಲಿ - ವಕೀಲ ಎಸ್.ಜಿ.ಪಾಟೀಲ್ ಸಲಹೆ

tvg-1
ತಾವರಗೇರಾದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ವಿಮುಕ್ತ ದೇವದಾಸಿಯರಿಗೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್. ಜಿ.ಪಾಟೀಲ್ ಉಪನ್ಯಾಸ ನೀಡಿದರು. ಪಪಂ ಉಪಾಧ್ಯಕ್ಷೆ ದುರ್ಗಮ್ಮ ಶಿರವಾಟಿ, ಸದಸ್ಯೆ ಮರಿಯಮ್ಮ ಬಿಸ್ತಿ, ಎಎಸ್‌ಐ ಈರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ದುರ್ಗಮ್ಮ ಪಾಟೀಲ್, ಯೋಜನಾಧಿಕಾರಿ ಭೀಮಣ್ಣ, ಅನುಷ್ಠಾನಾಧಿಕಾರಿಗಳಾದ ಸಕ್ಕುಬಾಯಿ, ಮರಿಯಪ್ಪ ಮುಳ್ಳೂರು ಇದ್ದರು.
Published on

ತಾವರಗೇರಾ: ದೇವದಾಸಿ ಎನ್ನುವುದು ಮೌಢ್ಯ ಹಾಗೂ ಅನಿಷ್ಟ ಪದ್ಧತಿಯಾಗಿದೆ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಜಿ.ಪಾಟೀಲ್ ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್‌ನ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ, ಪೊಲೀಸ್ ಇಲಾಖೆ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಅಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇವದಾಸಿ ಪದ್ಧತಿ ನಿರ್ಮೂಲನೆ ಆಗಬೇಕೆಂದರೆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆದು ಮುಖ್ಯ ವಾಹಿನಿಗೆ ಬರಬೇಕು ಎಂದು ವಿಮುಕ್ತ ದೇವದಾಸಿಯರಿಗೆ ಸಲಹೆ ನೀಡಿದರು.

ದೇವದಾಸಿ ಸಮರ್ಪಣೆ ನಿಷೇಧ ಕಾಯ್ದೆ 1982 ತಿದ್ದುಪಡಿ ಅಧಿನಿಯಮ 2009ರ ಕುರಿತು ವಕೀಲ ನಿಂಗಪ್ಪ ಸುದ್ದಿ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net