

ತಾವರಗೇರಾ: ಪಟ್ಟಣದ ಹಲವೆಡೆ ಸೋಮವಾರ ಹಾಗೂ ಮಂಗಳವಾರ ಸ್ಥಳೀಯ ಗಜಾನನ ಮಂಡಳಿಗಳು ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದವು.
ಇಲ್ಲಿಯ ಡಾ.ರಾಜಕುಮಾರ ರಸ್ತೆಯ ಸಾಯಿ ಸ್ಟುಡಿಯೋ ಮುಂದೆ ಇರುವ ದೇವಾಲಯದಲ್ಲಿ ಉತ್ತರಾಖಂಡ ಕೇದರನಾಥ ದೇಗುಲ ಮಾದರಿ ನಿರ್ಮಿಸಿ ಒಳಗಡೆ ಮಣ್ಣಿನ ಗಣೇಶನ ಮೂರ್ತಿ ಸ್ಥಾಪಿಸಲಾಗಿದೆ.
ಇದನ್ನೂ ಓದಿ: ಖಾಕಿ ಪಡೆ ಕಣ್ಗಾವಲಿನಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ
ಸಕಲ ಮಂಗಲ ವಾದ್ಯಗಳೊಂದಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗಣೇಶನ ಮೂರ್ತಿಯನ್ನು ಅಲಂಕೃತ ವಾಹನದಲ್ಲಿ ಮೆರವಣಿಗೆ ಮೂಲಕ ದೇಗುಲದವರೆಗೆ ಕರೆತರಲಾಯಿತು. ಸಂಘದ ಪ್ರದೀಪ ಪುಡೂರ, ಪ್ರಶಾಂತ ಕಲಾಲ, ಸಿದ್ದನಗೌಡ, ರವಿ ಹೂಗಾರ, ಮಂಜುನಾಥ ಚಿನ್ನಾಪೂರ, ಹನಮೇಶ, ನವೀನ, ಲಕ್ಷ್ಮೀಕಾಂತ ಇದ್ದರು.
ಇಲ್ಲಿಯ ಲಿಯೋಕ್ಲಬ್, ಪಪಂ ಕಚೇರಿ ಮುಂದೆ ಹಾಕಿದ ವಿಶೇಷ ಮಂಟಪದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಲಿಯೋಕ್ಲಬ್ ಗೌರವಾಧ್ಯಕ್ಷ ನಾರಾಯಣ ಗೌಡ ಮೆದಿಕೇರಿ, ಅಧ್ಯಕ್ಷ ವೀರನಗೌಡ ಪಾಟೀಲ, ಅಮರೇಶ ಗಾಂಜಿ, ಬಸನಗೌಡ ಓಲಿ, ವಿರೇಶ, ಸಾಗರಬೇರಿ ಗಣೇಶಮೂರ್ತಿಯ ಸ್ವಾಗತ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
14ನೇ ವಾರ್ಡ್‌ನ ಶ್ರೀ ವೀರಭದ್ರೇಶ್ವರ ನಗರದಲ್ಲಿ ದೊಡ್ಡ ಗಾತ್ರದ ಗಣೇಶ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಗಣೇಶನನ್ನು ಕರೆತರುವ ಮೆರವಣಿಗೆಯಲ್ಲಿ ಪಪಂ ಮಾಜಿ ಅಧ್ಯಕ್ಷ ವಿಕ್ರಮ ರಾಯ್ಕರ, ಉದ್ಯಮಿ ಶಾಮೂರ್ತಿ ಗೊಟೂರ , ಅಮರೇಶ ಕುಂಬಾರ, ನಾರಾಯಣ ಸುರ್ವೆ, ಹನುಮಂತ, ನಾರಾಯಣಪ್ಪ ಇದ್ದರು.