

ತಾವರಗೇರಾ: ಪಟ್ಟಣದ ಸರ್ಕಾರಿ ಕಚೇರಿಗಳಲ್ಲಿ ಹಾಗೂ ವಿವಿದೆಡೆ ಗಣರಾಜ್ಯೋತ್ಸವ ಪ್ರಯುಕ್ತ ಭಾನುವಾರ ಧ್ವಜಾರೋಹಣ ನೆರವೇರಿಸಲಾಯಿತು.
ಪಟ್ಟಣ ಪಂಚಾಯಿತಿ ಕಟ್ಟಡದ ಮುಂಭಾಗ ಪಪಂ ಅಧ್ಯಕ್ಷ ನಾರಾಯಣಗೌಡ ಮೆದಿಕೇಧ್ವಜಾರೋಹಣ ನೆರವೇರಿಸಿದರು. ಮುಖ್ಯಾಧಿಕಾರಿ ಮಹೇಶ ಅಂಗಡಿ, ಉಪಾಧ್ಯಕ್ಷೆ ದುರುಗಮ್ಮ, ಸದಸ್ಯರಾದ ಬಸನಗೌಡ ಓಲಿ, ವೀರನಗೌಡ , ಶಾಮೂರ್ತಿ ಅಂಚಿ, ಶಾಮಣ್ಣ ಭಜಂತ್ರಿ, ಅಮರಮ್ಮ , ಅಂಬುಜಾ , ಹಸೀನಾ ಬೇಗಂ, ಶಫಿಮುಲ್ಲಾ , ದಶರಥಸಿಂಗ , ಶ್ರೀನಿವಾಸ ಸಿಂಗ ಮಾಜಿ ಅಧ್ಯಕ್ಷ ವಿಕ್ರಮ ರಾಯ್ಕರ, ಸಿಬ್ಬಂದಿರಾಘವೇಂದ್ರ, ಪ್ರಲ್ಹಾದ ಜೋಶಿ, ಪ್ರಮುಖರಾದ ಅಬ್ದುಲ್ ಖಾದರ್, ಶಾಮೂರ್ತಿ ಕಟ್ಟಿಮನಿ, ಅಂತೋನಿ ರಾಜಾ, ಹುಲ್ಲಪ್ಪ ಗಾಂಜಿ ,ಮರೇಶ, ವಿರೇಶ, ಅಂಬಣ್ಣ ಕಂದಗಲ್ಲ, ವೀರನಗೌಡ, ಬಸನಗೌಡ ಓಲಿ ಇತರರಿದ್ದರು.
ಇಲ್ಲಿನ ಗಾಂಧಿ ಚೌಕದಲ್ಲಿ ಗಾಂಧೀಜಿ ಪ್ರತಿಮೆಗೆ ಪೂಜೆ ಸಲ್ಲಿಸಿ, ಪ.ಪಂ.ಉಪಾಧ್ಯಕ್ಷೆ ದುರುಗಮ್ಮ ಸಿರವಾಟಿ ಧ್ವಜಾರೋಹಣ ಮಾಡಿದರು. ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ, ಮುಖ್ಯಾಧಿಕಾರಿ ಮಹೇಶ ಅಂಗಡಿ, ಪಪಂ ಸದಸ್ಯರು, ಸಿಬ್ಬಂದಿ ಇದ್ದರು.
ಪಟ್ಟಣದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಪಪಂ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ ಧ್ವಜಾರೋಹಣ ನೆರವೇರಿಸಿದರು. ವಿವಿಧ ಶಾಲೆಗಳ ಮಕ್ಕಳಿಂದ ಆಕರ್ಷಕ ಗೌರವ ವಂದನೆ ನಡೆಯಿತು. ಪಪಂ ಮಾಜಿ ಅಧ್ಯಕ್ಷ ವಿಕ್ರಮ ರಾಯ್ಕರ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಪಪಂವತಿಯಿಂದ ಗೌರವಿಸಲಾಯಿತು. ಪಪಂ ಅಧಿಕಾರಿ ಪ್ರಲ್ಹಾದ ಜೋಶಿ, ಉಪಾಧ್ಯಕ್ಷೆ ದುರುಗಮ್ಮ ಸಿರವಾಟಿ, ಸದಸ್ಯರಾದ ಅಂಬುಜ ಹೂಗಾರ, ಅಮರಮ್ಮ ಕಂದಗಲ್ಲ, ಹಸೀನಾ ಬೇಗಂ ಬನ್ನು, ಬಸನಗೌಡ ಓಲಿ, ವೀರನಗೌಡ, ಶಫಿಮುಲ್ಲಾ, ಶಾಮೂರ್ತಿ ಅಂಚಿ,ದಶರಥ ಸಿಂಗ, ಶ್ರೀನಿವಾಸ ಸಿಂಗ, ಅಂಬಣ್ಣ ಕಂದಗಲ್ಲ, ಶಾಮಣ್ಣ ಭಜಂತ್ರಿ ಇತರರಿದ್ದರು. ಪಪಂ ಲೆಕ್ಕಾಧಿಕಾರಿ ರಾಘವೇಂದ್ರ ಮಸ್ಕಿ, ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ ಸೂಡಿ ನಿರ್ವಹಿಸಿದರು.