ಸುಂಕಲಮ್ಮ ದೇವಿಗೆ ಆಷಾಢ ಪೂಜೆ

Untitled design
ಆಷಾಢ ಮಾಸದ ಪ್ರಯುಕ್ತ ತಾವರಗೇರಾದ ಸುಂಕಲಮ್ಮ ದೇವಿಗೆ ಭಾವಸಾರ ಕ್ಷತ್ರಿಯ ಸಮುದಾಯದವರು ಪೂಜೆ ನೆರವೇರಿಸಿದರು.
Published on

ತಾವರಗೇರಾ: ಪಟ್ಟಣದ ಹೊರವಲಯದ ಸುಂಕಲಮ್ಮ ದೇವಸ್ಥಾನದಲ್ಲಿ ಆಷಾಢ ಮಾಸದ ಪೂಜೆಯನ್ನು ಭಾವಸಾರ ಕ್ಷತ್ರಿಯ ಸಮುದಾಯದವರು ಭಾನುವಾರ ನೆರವೇರಿಸಿದರು. ಮಹಿಳೆಯರು ಬೆಳಗ್ಗೆ ದೇವಿಗೆ ಅಭಿಷೇಕ, ಪೂಜೆಯನ್ನು ಸಲ್ಲಿಸಿದರು. ನಂತರ ಎಲ್ಲರೂ ಸೇರಿ ಭೋಜನ ಸವಿದರು. ಭಾವಸಾರ ಕ್ಷತ್ರಿಯ ಸಮುದಾಯದ ತಾಲೂಕಾಧ್ಯಕ್ಷ ಲಕ್ಷ್ಮಣ್ ಮಿರಜ್ಕರ್, ಉಪಾಧ್ಯಕ್ಷ ಪರಶುರಾಮ ಪತಂಗೆ , ಸದಸ್ಯರಾದ ರವಿಕುಮಾರ್ ಲೋಕರೆ, ದಶರಥ್, ಶಾಮಣ್ಣ ಮಿರಜಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net