ಅಪಘಾತ ತಡೆಯಲು ಡಿಟೆಕ್ಟಿವ್ ಯಂತ್ರ ಅಳವಡಿಕೆ

Untitled design (3)
ತಾವರಗೇರಾ ಹೊರವಲಯದ ಲಿಂಗಸುಗೂರು ರಸ್ತೆಯಲ್ಲಿ ಸ್ಪೀಡ್ ಲೇಸರ್ ಡಿಟೆಕ್ಟಿವ್ ಯಂತ್ರವನ್ನು ಪಿಎಸ್‌ಐ ಮಲ್ಲಪ್ಪ ವಜ್ರದ ವೀಕ್ಷಿಸಿದರು. ಸಿಬ್ಬಂದಿ ಆದೇಶ, ಹನುಮಂತ, ಯಮನೂರಪ್ಪ, ಕರಿಯಪ್ಪ, ಗೀತಮ್ಮ ಇದ್ದರು.
Published on

ತಾವರಗೇರಾ: ಅತಿ ವೇಗದಿಂದ ವಾಹನ ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಇದನ್ನು ತಪ್ಪಿಸಲು ಪಟ್ಟಣದಲ್ಲಿ ಸ್ಪೀಡ್ ಲೇಸರ್ ಡಿಟೆಕ್ಟಿವ್ ಯಂತ್ರ ಅಳವಡಿಸಲಾಗುತ್ತಿದೆ ಎಂದು ಪಿಎಸ್‌ಐ ಮಲ್ಲಪ್ಪ ವಜ್ರದ ಹೇಳಿದರು.

ಪಟ್ಟಣ ಹೊರವಲಯದ ಲಿಂಗಸುಗೂರು ರಸ್ತೆಯಲ್ಲಿ ಸ್ಪೀಡ್ ಲೇಸರ್ ಡಿಟೆಕ್ಟಿವ್ ಯಂತ್ರ ವೀಕ್ಷಿಸಿ ಗುರುವಾರ ಮಾತನಾಡಿದರು. ತಾವರಗೇರಾ ಕುಷ್ಟಗಿ, ಗಂಗಾವತಿ, ಲಿಂಗಸುಗೂರು, ಸಿಂಧನೂರಿಗೆ ಕೇಂದ್ರ ಬಿಂದುವಾಗಿದೆ. ಹೀಗಾಗಿ ಹೆಚ್ಚಾಗಿ ವಾಹನಗಳು ಸಂಚರಿಸುತ್ತವೆ ಎಂದರು.

ರಸ್ತೆ ಎಷ್ಟೇ ಅಗಲವಿದ್ದರೂ ವಾಹನಗಳು ಅತಿ ವೇಗದಿಂದ ಸಂಚರಿಸುವುದರಿಂದ ಅಪಘಾತಗಳು ಮೇಲಿಂದ ಮೇಲೆ ಆಗುತ್ತಿವೆ. ಅತಿಯಾದ ವೇಗದ ಚಲಾವಣೆಗೆ ಭಾರಿ ದಂಡ ವಿಧಿಸಲಾಗುತ್ತದೆ. ಆದರೂ ವಾಹನ ಸವಾರರು ಎಚ್ಚೆತ್ತುಕೊಳ್ಳುತ್ತಿಲ್ಲ. ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರವು ಪೊಲೀಸ್ ಇಲಾಖೆಗೆ ಯಂತ್ರ ನೀಡಿದೆ. ಈ ಯಂತ್ರದಿಂದ ಐದು ಕಿ.ಮಿ. ದೂರದಿಂದ ವಾಹನಗಳ ವೇಗವನ್ನು ಪತ್ತೆಹಚ್ಚ ಬಹುದಾಗಿದೆ. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು. ಎಲ್ಲರೂ ಸಂಚಾರ ನಿಯಮ ಪಾಲಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net