ತಾವರಗೇರಾ ಸಿದ್ಧಾರೂಢ ಮಠಕ್ಕೆ ಕುಮಾರಶ್ರೀ ಪೀಠಾಧಿಪತಿ

Patabhishek
ತಾವರಗೇರಾದ ಶ್ರೀ ಸಿದ್ಧಾರೂಢ ಮಠದ ನೂತನ ಪೀಠಾಧಿಪತಿಗಳ ಪಟ್ಟಾಭಿಷೇಕ ಕಾರ್ಯ ಮಂಗಳವಾರ ನೆರವೇರಿತು.
Published on

ತಾವರಗೇರಾ: ಇಲ್ಲಿನ ಶ್ರೀ ಸಿದ್ಧಾರೂಢ ಮಠಕ್ಕೆ ನೂತನ ಪೀಠಾಧಿಪತಿಯಾಗಿ ಶ್ರೀ ಕುಮಾರಸ್ವಾಮಿಗಳು ಮಂಗಳವಾರ ಪಟ್ಟಾಧಿಕಾರಗೊಂಡರು.

ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಶ್ರೀಗಳ ಪಟ್ಟಾಭಿಷೇಕ ಕಾರ್ಯ ನೆರವೇರಿತು. ಲಿಂಗನೂರು, ಅಕ್ಕಲಕೋಟ, ಕಡಬಗಾಂವ, ಅಲಕನೂರು, ಬೆಳಗೊಡ, ಬಾದಾಮಿ, ಮೈಂದರಗಿ, ವಿಜಯಪುರ ಹಾಗೂ ಹರಿದ್ವಾರ ಮಠಾಧೀಶರು ಆಗಮಿಸಿದ್ದರು

ಸಂಜೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದವರೆಗೆ ನೂತನ ಪೀಠಾಧಿಪತಿಗಳ ಮೆರವಣಿಗೆ ಸಾಗಿತು. ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳ ತುಲಾಭಾರ ಸೇವೆ ಜರುಗಿತು. ವಿವಿಧ ಮಠಾಧೀಶರು, ಗಣ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net