ಕೆ ಕೆ ರೈಡರ್ಸ್ ತಂಡ ಜಯಶಾಲಿ

Untitled design (59)
ತಾವರಗೇರಾ ಶ್ಯಾಮಿದ್ ಅಲಿ ಉರುಸ್ ಪ್ರಯುಕ್ತ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಜಯಗಳಿಸಿದ ಕೆ ಕೆ ರೈಡರ್ಸ್ ತಂಡಕ್ಕೆ ಟ್ರೋಪಿ ನೀಡಿ ಗೌರವಿಸಲಾಯಿತು .ಗ್ರಾಪಂ ಮಾಜಿ ಸದಸ್ಯ ಸಾಗರ ಭೇರಿ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ ಜೂಲಕುಂಟಿ, ಪಟ್ಟಣ ಪಂಚಾಯಿತಿ ಸದಸ್ಯ ಬಸನಗೌಡ ಓಲಿ ಇತರರಿದ್ದರು.
Published on

ತಾವರಗೇರಾ: ಪಟ್ಟಣದ ಶ್ಯಾಮಿದ್ ಅಲಿ ಉರುಸ್ ಪ್ರಯುಕ್ತ ಬಾಲ್ ಬ್ಲಾಸ್ಟರ್ ಕ್ಲಬ್ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾನುವಾರ ಕೆ ಕೆ ರೈಡರ್ಸ್ ತಂಡವು ಜಯಗೊಳಿಸಿತು.

ಎಂಎಂಎಸ್ ತಂಡ ರನ್ನರಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು. ವಿಜೇತ ತಂಡಗಳಿಗೆ ಬಹುಮಾನ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಪಂದ್ಯಾವಳಿಯಲ್ಲಿ ನಾಲ್ಕು ತಂಡಗಳು ಭಾಗವಹಿಸಿದ್ದವು. ಪ್ರಮುಖರಾದ ಅರುಣ ಕುಮಾರ ನಾಲತವಾಡ, ಫಯಾಜ್ ಬನ್ನು, ಶೇಖರಪ್ಪ ಮುತ್ತೇನವರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net