ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ತರಬೇತಿ

24 TVG 01
Published on

ತಾವರಗೇರಾ: ಇಲ್ಲಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಪಪಂ, ಜಿಲ್ಲಾಡಳಿತ ಹಾಗೂ ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ, ಸಾಮಾಜಿಕ ಕ್ರೋಡೀಕರಣ, ಸಾಂಸ್ಥಿಕ ಉಪ ಘಟಕ, ದಶ ಸೂತ್ರಗಳ ಸಾಮರ್ಥ್ಯ ಅಭಿಯಾನ ಕುರಿತು ಸ್ವಸಹಾಯ ಗುಂಪಿನ 70 ಮಹಿಳೆಯರಿಗೆ ಒಂದು ದಿನದ ತರಬೇತಿ ಶುಕ್ರವಾರ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಭೀಮಪ್ಪ ಹವಳೆ, ಖಾಜಾ ಬನ್ನಿ , ಖಾಜಾ ಹುಸೇನ್, ಅಬ್ದುಲ್ ಖಾದರ್ ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡಿದರು. ಇದೇ ಸಂದರ್ಭದಲ್ಲಿ ಲಕ್ಷ್ಮೀದೇವಿ ಮಹಿಳಾ ಒಕ್ಕೂಟವನ್ನು ಪಪಂ ಮುಖ್ಯಾಧಿಕಾರಿ ನಬೀಸಾಬ್ ಖುದನವರ ಉದ್ಘಾಟಿಸಿದರು. ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ ವ್ಯವಸ್ಥಾಪಕ ಅಹಮ್ಮದ್ ಹುಸೇನ್, ಪಟ್ಟಣದ ಮಹಿಳಾ ಗುಂಪುಗಳ ಒಕ್ಕೂಟದ ಅಧ್ಯಕ್ಷೆ ಆಶಾಬಿ, ಉಪಾಧ್ಯಕ್ಷೆ ಅಂಬಿಕಾ ಕುಂಬಾರ, ಕಾರ್ಯದರ್ಶಿ ಗಂಗಮ್ಮ ಕಮ್ಮಾರ, ಖಜಾಂಚಿ ಶಂಕ್ರಮ್ಮ ಕುಂಬಾರ, ಪಪಂ ಸದಸ್ಯೆ ಅಂಬ್ರಮ್ಮ, ಶಾಮಣ್ಣ ಭಜಂತ್ರಿ ಇತರರಿದ್ದರು. ಪಪಂ ಸಿಬ್ಬಂದಿ ಶರಣಬಸವ ಸೈಂದರ ಸ್ವಾಗತಿಸಿದರು. ಭೀಮಪ್ಪ ಹವಳೆ ಕಾರ್ಯಕ್ರಮ ನಿರೂಪಿಸಿದರು. ಖಾಜಾ ಹುಸೇನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net