ಕಟ್ಟಡ ನಿರ್ಮಾಣ ಕಾರ್ಯ ಶ್ಲಾಘನೀಯ

tvg-1
ಲಿಂಗದಹಳ್ಳಿ ಗ್ರಾಮದ ಸ.ಹಿ.ಪ್ರಾ.ಶಾಲಾ ಆವರಣದಲ್ಲಿ ಆಯೋಜಿಸಿದ್ದ ಶಾಲಾ ಕಟ್ಟಡ ಹಸ್ತಾಂತರ ಕಾರ್ಯಕ್ರಮದಲ್ಲಿ ವಿಧಾನಸಭೆ ವಿಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ ಮಾತನಾಡಿದರು. ಪ್ರಮುಖರಾದ ನಾರಾಯಣಸ್ವಾಮಿ, ಗೋಪಾಲಾಚಾರ್ಯ, ಆಸೀಫ್ ಅಲಿ, ಲಲಿತಮ್ಮ ಇತರರಿದ್ದರು.
Published on

ತಾವರಗೇರಾ: ಹೈದರಾಬಾದ್ ಮೂಲದ ಒಸಾಟ್ ಕಂಪನಿ ಸಹಯೋಗ ಬೆಂಗಳೂರಿನ ಪ್ರಮತಿ ಸಾಫ್ಟ್‌ವೇರ್‌ಪ್ರೈ.ಲಿ. ನೇತೃತ್ವದಲ್ಲಿ 61 ಲಕ್ಷ ರೂ. ವ್ಯಯಿಸಿ 11 ತಿಂಗಳಲ್ಲಿ ನಾಲ್ಕು ಶಾಲಾ ಕೊಠಡಿಗಳನ್ನು ನಿರ್ಮಿಸಿ ಶಿಕ್ಷಣ ಇಲಾಖೆಗೆ ಉಚಿತವಾಗಿ ಹಸ್ತಾಂತರಿಸಿದ್ದು ಶ್ಲಾಘನೀಯ ಕಾರ್ಯ ಎಂದು ವಿಧಾನಸಭೆ ವಿಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಹೇಳಿದರು.

ಸಮೀಪದ ಲಿಂಗದಹಳ್ಳಿ ಗ್ರಾಮದ ಸ.ಹಿ.ಪ್ರಾ.ಶಾಲಾ ಆವರಣದಲ್ಲಿ ನಿರ್ಮಿಸಿದ ನಾಲ್ಕು ಶಾಲಾ ಕೊಠಡಿಗಳನ್ನು ಶಿಕ್ಷಣ ಇಲಾಖೆಗೆ ಶನಿವಾರ ಹಸ್ತಾಂತರ ಮಾಡಿಸಿ ಮಾತನಾಡಿದರು. ಮಕ್ಕಳು ಕಷ್ಟಪಟ್ಟು ಓದಿ ಗ್ರಾಮಕ್ಕೆ, ಸಂಸ್ಥೆಗೆ ಕೀರ್ತಿ ತರಬೇಕು.

ಕಟ್ಟಡ ಕಾಮಗಾರಿ ಮುಗಿಯುವವರೆಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ, ಸದಸ್ಯರು, ಊರಿನ ಪ್ರಮುಖರು, ಶಿಕ್ಷಕರೆಲ್ಲ ತಮ್ಮನ್ನು ತೊಡಗಿಸಿಕೊಂಡಿರುವುದು ಅವರಲ್ಲಿರುವ ಶಿಕ್ಷಣ ಅಭಿಮಾನ ತೋರುತ್ತದೆ ಎಂದು ತಿಳಿಸಿದರು.

ಒಸಾಟ್ ಕಂಪನಿ ಪ್ರತಿನಿಧಿಗಳಾದ ನಾರಾಯಣಸ್ವಾಮಿ, ಗೋಪಾಲಾಚಾರ್ಯ ಹಾಗೂ ಆಸೀಫ್ ಅಲಿ ಅವರನ್ನು ಸನ್ಮಾನಿಸಲಾಯಿತು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೋಮನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ, ಸಿಆರ್‌ಪಿ ಶಶಿಕಾಂತ, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ, ಭೀಮಣ್ಣ ಮುರುಡಿ, ಮುಖ್ಯ ಶಿಕ್ಷಕರಾದ ಆನಂದ ಸೊಬಗಿನ, ವೀರಭದ್ರಯ್ಯ ಹೊಸಮಠ, ವೈ.ಎಚ್. ಕಡೇಮನಿ, ಪ್ರಮುಖರಾದ ಬಸವರಾಜ ಅಂಗಡಿ, ಕಲಾವಿದ ಚಂದ್ರಶೇಖರ, ಕರೇಗೌಡ, ಸುಭಾನಸಾಬ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net