

ತಾವರಗೇರಾ: ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹರಿದು ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ.
ಮೃತನನ್ನು ಕಲ್ಮಂಗಿ ಗ್ರಾಮದ ನಾಗಪ್ಪ ಹನುಮಪ್ಪ ದನಕಾಯಿ (55) ಎಂದು ತಿಳಿದು ಬಂದಿದೆ. ತಾವರಗೇರಾ ಪಟ್ಟಣದ ಹಳೆ ಬಸ್ ನಿಲ್ದಾಣದ ವೃತ್ತದಲ್ಲಿ ಪ್ರಯಾಣಿಕನನ್ನು ಇಳಿಸಿ ಬಸ್ ಮುಂದೆ ಸಾಗಿದ ಸಂದರ್ಭದಲ್ಲಿ ನಾಗಪ್ಪ ಆಯತಪ್ಪಿ ಹಿಂದಿನ ಗಾಲಿಗೆ ಬಿದ್ದಿದ್ದರಿಂದ ತಲೆಯ ಮೇಲೆ ಗಾಲಿ ಹತ್ತಿದ್ದು, ತಲೆಯ ಭಾಗ ಚಪ್ಪಟೆಯಾಗಿದೆ. ಬಸ್ ಚಾಲಕ ಸಂಗಯ್ಯ ಕೆಸೂರನನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.