ಸ್ವ ಸಾಮರ್ಥ್ಯದಿಂದ ಉತ್ತೀರ್ಣರಾಗಿ

Untitled design (17)
ತಾವರಗೇರಾದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಂಭ್ರಮ ಸಂವಾದ ಕಾರ್ಯಕ್ರಮಕ್ಕೆ ಬಿಇಒ ಸುರೇಂದ್ರ ಕಾಂಬಳೆ ಚಾಲನೆ ನೀಡಿದರು. ಪ್ರಮುಖರಾದ ಜಗದೀಶಪ್ಪ , ರಾಮೇಶ್ವರ ಡಾಣಿ, ನಿಂಬಮ್ಮ ತುಂಬದ, ಮಂಜುನಾಥ, ಬಸನಗೌಡ ಇತರರಿದ್ದರು.
Published on

ತಾವರಗೇರಾ: ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗಳಿಗೆ ಆತಂಕಗೊಳ್ಳದೆ ಸಂಭ್ರಮದಿಂದ ಎದುರಿಸಲಿ ಎಂದು ಬಿಇಒ ಸುರೇಂದ್ರ ಕಾಂಬಳೆ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಂಭ್ರಮ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಮಾನಸಿಕ ಹಾಗೂ ದೈಹಿಕವಾಗಿ ಸಿದ್ಧರಾಗಿರಬೇಕು ಹೊರತು ಭಯ ಪಡಬಾರದು. ಅಧ್ಯಯನ ಹಾಗೂ ಸ್ವ ಸಾಮರ್ಥ್ಯದಿಂದ ಉತ್ತೀರ್ಣರಾಗಬೇಕು ಎಂದರು.

ಇದನ್ನೂ ಓದಿ:

ಕಿಲಾರಹಟ್ಟಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ರಾಮೇಶ್ವರ ಡಾಣಿ ವಿಶೇಷ ಉಪನ್ಯಾಸ ನೀಡಿದರು. ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಉಪ ಪ್ರಾಚಾರ್ಯ ಎಂ.ಎಸ್.ಗೊಣ್ಣಾಗರ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ. ಜಗದೀಶಪ್ಪ, ಮೆಣೇಧಾಳ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ನಿಂಬಮ್ಮ ತುಂಬದ, ಆಡಳಿತಾಧಿಕಾರಿ ಬಸನಗೌಡ ಹಾಗಲದಾಳ, ಸಹಶಿಕ್ಷಕಿ ಶ್ರೀದೇವಿ ಜ್ಞಾನಮೂರ್ತಿ, ಪ್ರಮುಖರಾದ ಮಂಜುನಾಥ ಬಿಳೆಗುಡ್ಡ, ವೆಂಕನಗೌಡ ಪಾಟೀಲ್, ತಿಪ್ಪಣ್ಣ ತಾವರಗೇರಿ, ಹನುಮಂತಮ್ಮ, ಜ್ಯೋತಿ ಹಳ್ಳೂರ್, ವೀಣಾ, ದೇವೇಂದ್ರಪ್ಪ ಜೋಗಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net