ಇಳಕಲ್ ಬಳಿ ನಡೆದ ಕಾರು ಅಪಘಾತದಲ್ಲಿ ಮೂವರು ಸಾವು

Ilkal Near Accident
ಇಳಕಲ್ ಬಳಿ ಸೇತುವೆಗೆ ಡಿಕ್ಕಿ ಹೊಡೆದ ಬೊಲೆರೊ ನಜ್ಜುಗುಜ್ಜಾಗಿರುವುದು.
Published on

ತಾವರಗೇರಾ: ಪಟ್ಟಣದ ಒಂದೇ ಕುಟುಂಬದ ಮೂವರು ಭಾನುವಾರ ರಾತ್ರಿ ಇಳಕಲ್ ಬಳಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ವಿಜಯಪುರದ ಹತ್ತಿರ ದೇವಸ್ಥಾನಕ್ಕೆ ಹೋಗಿ ವಾಪಸಾಗುವಾಗ ರಾಷ್ಟ್ರೀಯ ಹೆದ್ದಾರಿ 50ರ ಇಳಕಲ್ ಬಳಿ ನಿಯಂತ್ರಣ ತಪ್ಪಿದ ಬೊಲೆರೋ ವಾಹನ ಸೇತುವೆಗೆ ಡಿಕ್ಕಿ ಹೊಡೆದಿದೆ.

ಮೃತರು ಪಟ್ಟಣದ ಕಿಡದೂರ ನಾಯಕ ಕುಟುಂಬದವರು. ಅಪಘಾತದಲ್ಲಿ ಶಾಮೀದಸಾಬ್ ಕಿಡದೂರನಾಯಕ (65) ಮೌಲಾಸಾಬ್ ಕಿಡದೂರನಾಯಕ (60) ಮತ್ತು ಇಮಾಮ್‌ಬಿ ಕಿಡದೂರನಾಯಕ (60) ಮೃತಪಟ್ಟಿದ್ದಾರೆ. ಇನ್ನಿಬ್ಬರು ತೀವ್ರ ಗಾಯಗೊಂಡಿದ್ದು ಬಾಗಲಕೋಟೆ ಆಸ್ಪತ್ರೆಗೆ ಸೇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net