ಸೋಮನಾಥ ದೇವರ ಜಾತ್ರೆ ಜೋರು

RATOTHSAVA
ತಾವರಗೇರಾ ಸಮೀಪದ ಪುರದ ಗ್ರಾಮದಲ್ಲಿ ಶ್ರೀ ಸೋಮನಾಥ ದೇವರ ರಥೋತ್ಸವ ಸೋಮವಾರ ಜರುಗಿತು.
Published on

ತಾವರಗೇರಾ: ಸಮೀಪದ ಪುರ ಗ್ರಾಮದ ಶ್ರೀ ಸೋಮನಾಥ ದೇವರ ಜಾತ್ರೆ ನಿಮಿತ್ತ ಸೋಮವಾರ ಸಂಜೆ ಅದ್ದೂರಿ ರಥೋತ್ಸವ ಜರುಗಿತು.

ಸಕ ದೊಡ್ಡನಗೌಡ ಪಾಟೀಲ, ತೇರಿಗೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ದೇವಸ್ಥಾನ ಆಡಳಿತಾಧಿಕಾರಿ ಹಾಗೂ ಕುಷ್ಟಗಿ ತಹಸೀಲ್ದಾರ್ ಅಶೋಕ ಸಿಗ್ಗಾಂವಿ, ಕಂದಾಯ ಇಲಾಖೆ ನಾಡ ತಹಸೀಲ್ದಾರ್ ಪ್ರಕಾಶ, ಸಿಬ್ಬಂದಿ ಶರಣಪ್ಪ , ಸೂರ್ಯಕಾಂತ, ಮುಖಂಡರಾದ ಅನ್ನದಾನರಾಜ ನಾಡಗೌಡ, ರಮೇಶ ಗಿರಣಿ, ಸೋಮಪ್ಪ ಮುಳ್ಳೂರ ಇತರರಿದ್ದರು.

ಪಿಎಸ್‌ಐಗಳಾದ ಮಲ್ಲಪ್ಪ ವಜ್ರದ,ನಾಗರಾಜ ಕೊಟಗಿ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net