ತಾವರಗೇರಾದಲ್ಲಿ 33 ಸ್ಟೂಡೆಂಟ್ಸ್ ಗೈರು

Untitled design(13)
Published on

ತಾವರಗೇರಾ: ಪಟ್ಟಣದ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ಪಿಯು ಪರೀಕ್ಷೆ ಶಾಂತಿಯುತವಾಗಿ ನಡೆಯಿತು.

ಇಲ್ಲಿನ ಕೇಂದ್ರದಲ್ಲಿ ಕನ್ನಡ ವಿಷಯ ಪರೀಕ್ಷೆಯಲ್ಲಿ ಒಟ್ಟು 6 ಪಿಯು ಕಾಲೇಜಿನ 464 ವಿದ್ಯಾರ್ಥಿಗಳು ಕನ್ನಡ ವಿಷಯದ ಪರೀಕ್ಷೆ ಬರೆದರು. 33 ವಿದ್ಯಾರ್ಥಿಗಳು ಗೈರಾಗಿದ್ದರು. ಪಟ್ಟಣದ ಸರ್ಕಾರಿ ಬಾಲಕರ ಪಪೂ ಕಾಲೇಜು, ಸರ್ಕಾರಿ ಬಾಲಕಿಯರ ಪಪೂ ಕಾಲೇಜು, ಎಸ್‌ಎಂ.ವಿ.ಪಪೂ ಕಾಲೇಜು, ಎಸ್.ಎಸ್.ವಿ.ಪ.ಪೂ ಕಾಲೇಜು, ಹಿರೇಮನ್ನಾಪೂರ ಪ.ಪೂ.ಕಾಲೇಜು, ನವಲಹಳ್ಳಿ ಪ.ಪೂ.ಕಾಲೇಜು ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 40 ಕೊಠಡಿ ಮೇಲ್ವಿಚಾರಕರು ಕಾರ್ಯ ನಿರ್ವಹಿಸಿದರು ಎಂದು ಕೇಂದ್ರದ ಅಧೀಕ್ಷಕ ಡಾ.ಎಸ್. ಎಸ್.ಪೋರೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net