

ತಾವರಗೇರಾ: ವಿದ್ಯಾರ್ಥಿಗಳು ಚನ್ನಾಗಿ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬೇಕು ಎಂದು ಸಿಆರ್‌ಪಿ ಕಾಶೀನಾಥ ನಾಗಲೀಕರ ಹೇಳಿದರು. ಪಟ್ಟಣದ ಬಸವಣ್ಣ ಕ್ಯಾಂಪಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 7ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಸರಸ್ವತಿ ಪೂಜೆ ಸಮಾರಂಭದಲ್ಲಿ ಮಾತನಾಡಿದರು. ಮುಖ್ಯಶಿಕ್ಷಕ ಶಂಕರಗೌಡ ಸರನಾಯಕ ಅಧ್ಯಕ್ಷತೆ ವಹಿಸಿದ್ದರು. ಇಸಿಒ ರಾಗಪ್ಪ ಶ್ರೀರಾಮ ಮಾತನಾಡಿದರು. ಅರಣ್ಯ ಇಲಾಖೆ ಅಧಿಕಾರಿ ಮಹಾಂತೇಶರಡ್ಡಿ, ರೇಣಮ್ಮ, ಸವಿತಾ ಕೊಂಡಕುಂದಿ, ದೊಡ್ಡಬಸವ ಪಾಟೀಲ್ ಇದ್ದರು. ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.