ಮತಯಂತ್ರಗಳ ಸಂಖ್ಯೆ ಬದಲು, ನಾಗರಿಕ ಅಭಿವೃದ್ಧಿ ವೇದಿಕೆ, ಬಿಜೆಪಿ ಪ್ರತಿಭಟನೆ

241221 Tavaragera BJP Protest
ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯ ವೇದಿಕೆ ಸ್ಥಳಾಂತರಕ್ಕೆ ಒತ್ತಾಯಿಸಿ ತಾವರಗೇರಾದಲ್ಲಿ ನಾಗರಿಕ ಅಭಿವೃದ್ಧಿ ವೇದಿಕೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
Published on

ತಾವರಗೇರಾ: ಕುಷ್ಟಗಿ ತಹಸಿಲ್ ಕಚೇರಿಯ ಚುನಾವಣಾ ವಿಭಾಗದಲ್ಲಿರುವ ತಾವರಗೇರಾ ಪಪಂ ಚುನಾವಣೆಯ ವಿದ್ಯುನ್ಮಾನ ಮತಯಂತ್ರಗಳ ಸಂಖ್ಯೆ ಬದಲಾಗಿವೆ ಎಂದು ಆರೋಪಿಸಿ ನಾಗರೀಕ ಅಭಿವೃದ್ಧಿ ವೇದಿಕೆ ಹಾಗೂ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಡಿ.27ರಂದು ಮತದಾನ ನಡೆಯಲಿದೆ. ಆದರೆ, ದಿಢೀರನೇ ಮತಯಂತ್ರಗಳ ಸಂಖ್ಯೆ ಬದಲಾಗಿರುವುದಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ವಾದ ಅಲ್ಲಗಳೆದಿರುವ ಸ್ಥಳೀಯ ಸಿಬ್ಬಂದಿ, ತಹಸೀಲ್ದಾರ್ ಎಂ.ಸಿದ್ದೇಶ ಹಾಗೂ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಸಮಕ್ಷಮದಲ್ಲಿ ಮಂತ್ರಯಂತ್ರಗಳನ್ನು ಮರು ಪರಿಶೀಲಿಸುವ ಭರವಸೆ ನೀಡಿದರು.

ಪ್ರಚಾರ ಸಭೆ ವೇದಿಕೆಗೆ ಆಕ್ಷೇಪ: ಪಟ್ಟಣ ಪಂಚಾಯಿತಿ ಬಳಿ ಆಯೋಜಿಸಲಾಗುತ್ತಿದ್ದ ಕಾಂಗ್ರೆಸ್ ಬಹಿರಂಗ ಸಭೆಗೆ ನಾಗರಿಕ ಅಭಿವೃದ್ಧಿ ವೇದಿಕೆ ತಕರಾರು ವ್ಯಕ್ತಪಡಿಸಿತು. ರಸ್ತೆಯಲ್ಲಿ ವೇದಿಕೆ ಹಾಕಿ ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ ಎಂದು ವೇದಿಕೆ ನಿರ್ಮಿಸಲು ಅವಕಾಶ ಕಲ್ಪಿಸಿದ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಪ್ರತಿಭಟನಾಕಾರರು ತಹಸೀಲ್ದಾರ್ ಜತೆ ಈ ಕುರಿತು ಚರ್ಚಿಸಿದರು. ಅನುಮತಿ ಪಡೆಯದ ವಿಷಯ ಗೊತ್ತಾದಾಗ ವೇದಿಕೆ ನಿರ್ಮಾಣ ಕೆಲಸ ಮೊಟಕುಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net