ಚರ್ಚ್ ನಿರ್ಮಿಸಲು ಅವಕಾಶ ನೀಡದಿರಿ

MANAVI
ತಾವರಗೇರಾದ ಪಪಂ ಮುಖ್ಯಾಧಿಕಾರಿ ನಬಿಸಾಬ್ ಖುದನವರಗೆ ಹಿಂದು ಜಾಗರಣ ವೇದಿಕೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ಮಂಜುನಾಥ, ಸಿದ್ಧನಗೌಡ, ಭೀಮಣ್ಣ, ಪ್ರಮೋದಸಿಂಗ್, ಲಕ್ಷ್ಮಣ ಮುಖಿಯಾಜಿ, ನವೀನ, ಶರಣಬಸವ , ಭುವನೇಶ, ಮುದಿಯಪ್ಪ ಇತರರಿದ್ದರು.
Published on

ತಾವರಗೇರಾ: ಪಟ್ಟಣದಲ್ಲಿ ಚರ್ಚ್ ನಿರ್ಮಿಸಲು ಅವಕಾಶ ನೀಡಬಾರದು ಒತ್ತಾಯಿಸಿ ಹಿಂದು ಜಾಗರಣ ವೇದಿಕೆಯ ಪದಾಧಿಕಾರಿಗಳು ಪಪಂ ಮುಖ್ಯಾಧಿಕಾರಿ ನಬಿಸಾಬ್ ಖುದನವರಗೆ ಸೋಮವಾರ ಮನವಿ ಸಲ್ಲಿಸಿದರು.

ಪಟ್ಟಣದ 2ನೇ ವಾರ್ಡ್ ಸರ್ವೇ ನಂ 07/08 ರಲ್ಲಿ 03 ಎಕರೆ ಜಮೀನನ್ನು ಬಳ್ಳಾರಿಯ ಕ್ಯಾಥೋಲಿಕ್ ಡಯಾಸಿಸ್ ಸಂಸ್ಥೆಯ ಬಿಷಪ್ ಹೆನ್ರಿ ಡಿಸೋಜಾ ಖರೀದಿಸಿದ್ದಾರೆ. 2015ರ ಕಾಯ್ದೆ ಪ್ರಕಾರ ಶೈಕ್ಷಣಿಕ ಉದ್ದೇಶಕ್ಕೆಂದು ಭೂ ಪರಿವರ್ತನೆ ಮಾಡಿಸಿಕೊಂಡಿದ್ದಾರೆ. ಈಗ ಅದರಲ್ಲಿ ಚರ್ಚ್ ಕಟ್ಟಲು ಕಟ್ಟಡದ ಪರವಾನಗಿ ಕೇಳಿ ಪಟ್ಟಣ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದಾರೆ. ಚರ್ಚ್ ನಿರ್ಮಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಸಂಘಟನೆಯ ಮುಖಂಡರಾದ ಮಂಜುನಾಥ್ ಜೂಲಕುಂಟಿ, ಸಿದ್ದನಗೌಡ ಪುಂಡಗೌಡ್ರು, ಲಕ್ಷ್ಮಣ ಮುಖಯಾಜಿ, ಭೀಮೇಶ್ ಭಂಡಾರಿ, ಶಾಮಣ್ಣ ಗುಂಡೂರು, ಪ್ರಶಾಂತ್ ಕಲಾಲ್, ಭುವನೇಶ್ ಕಲಾಲ್, ಮಂಜುನಾಥ್ ಚಿನ್ನಾಪುರ, ಶರಣಬಸವ ಯಾದವ, ಮುದಿಯಪ್ಪ , ಪ್ರಮೋದಸಿಂಗ್, ನವೀನ ವಲೇಕಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net