ಕಾರ್ ಟೈರ್ ಬ್ಲಾಸ್ಟ್ ಆಗಿ ಓರ್ವ ಸಾವು

Untitled design(1)
Published on

ತಾವರಗೇರಾ: ಪಟ್ಟಣದ ತಾವರಗೇರಾ ಮುದಗಲ್ ರಸ್ತೆಯಲ್ಲಿ ಬುಧವಾರ ಬೆಳಗ್ಗೆ ಒಂದೇ ಕುಟುಂಬದವರಿದ್ದ ಕಾರೊಂದರ ಟೈರ್ ಬ್ಲಾಸ್ಟ್ ಆಗಿ ಸ್ಥಳದಲ್ಲಿಯೇ ಅದರಲ್ಲಿದ್ದ ಒಬ್ಬರು ಮೃತಪಟ್ಟಿದ್ದು, ಏಳು ಜನರಿಗೆ ಗಂಭೀರ ಗಾಯಗಳಾಗಿವೆ. ರಾಯಚೂರು ಜಿಲ್ಲೆಯ ಮುದಗಲ್‌ನ ಶಂಕರಲಿಂಗಪ್ಪ ನಾಗಲೀಕರ (57) ಮೃತರು. ನಾಗರಾಜ್ ನಾಗಲೀಕರ, ಸುನಂದಾ ನಾಗಲೀಕರ, ಸಾಹಿತ್ಯ, ಸಂತೋಷ, ಸನ್ನಿಧಿ, ವನಜಾಕ್ಷಿ, ಸಂಚಿತ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ತಾವರಗೇರಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆಗೆ ರವಾನಿಸಲಾಗಿದೆ. ಕುಟುಂಬದವರು ಬಳ್ಳಾರಿ ಜಿಲ್ಲೆಯ ಕುರುಗೋಡು ಹತ್ತಿರದ ಬಾದನಹಟ್ಟಿಯ ಉಡಚಮ್ಮದೇವಿ ದೇವಸ್ಥಾನಕ್ಕೆ ಹರಿಕೆ ಸಲ್ಲಿಸಿ, ಮರಳಿ ಮುದಗಲ್‌ಗೆ ಬರುವಾಗ ದುರ್ಘಟನೆ ನಡೆದಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net