ಈ ವರ್ಷ ಬಿಳಿಜೋಳ ಬೆಳೆ ಸಮೃದ್ಧ

Karahunnim
ತಾವರಗೇರಾದಲ್ಲಿ ಕರಿ ಹರಿದ ಎತ್ತುಗಳನ್ನು ಗುರುವಾರ ಮೆರವಣಿಗೆ ಮಾಡಲಾಯಿತು. ಮುಖಂಡರಾದ ಮಲ್ಲಪ್ಪ ಜುಮಲಾಪೂರ, ಪಪಂ ಸದಸ್ಯ ಕರಡೆಪ್ಪ ನಾಲತವಾಡ, ಆದಪ್ಪ ನಾಲತವಾಡ, ದೊಡ್ಡನಗೌಡ ಸರನಾಯಕ, ಶರಣಪ್ಪ ಇತರರಿದ್ದರು.
Published on

ತಾವರಗೇರಾ: ಕಾರಹುಣ್ಣಿಮೆ ಪ್ರಯುಕ್ತ ಪಟ್ಟಣದ ಎರಡೂ ಅಗಸಿ ಹತ್ತಿರ ಗುರುವಾರ ಸಂಜೆ ಮೂಲಾನಕ್ಷತ್ರದಲ್ಲಿ ಎತ್ತುಗಳನ್ನು ಓಡಿಸಿ ಕರಿ ಹರಿಯಲಾಯಿತು.

ಸಂಪ್ರದಾಯದಂತೆ ಗ್ರಾಮಾಧಿಕಾರಿ ಕಚೇರಿಯಿಂದ ಮಜಲಿನೊಂದಿಗೆ ಗ್ರಾಮಾಧಿಕಾರಿ ಮೈತ್ರಾ ಹುನಗುಂದ ಹೋರಿಗಳ ಕರಿ ಹರಿಯುವ ಸ್ಪರ್ಧೆಗೆ ಚಾಲನೆ ನೀಡಿದರು. ಬಿಳಿ ಬಣ್ಣದ ಎತ್ತುಗಳು ಮುಂದೆ ಓಡಿ ಕರಿ ಹರಿದವು.

ಇದರಿಂದ ಈ ವರ್ಷ ಬಿಳಿಜೋಳ ಹೆಚ್ಚಿನ ಪ್ರಮಾಣದಲ್ಲಿ ಸಮೃದ್ಧಿಯಾಗಿ ಬೆಳೆಯುತ್ತದೆ ಎಂಬುದು ರೈತರ ನಂಬಿಕೆಯಾಗಿದೆ. ಮುಖಂಡರಾದ ಮಲ್ಲಪ್ಪ ಜುಮಲಾಪೂರ, ಪಪಂ ಸದಸ್ಯ ಕರಡೆಪ್ಪ ನಾಲತವಾಡ, ಆದಪ್ಪ ನಾಲತವಾಡ, ದೊಡ್ಡನಗೌಡ ಸರನಾಯಕ, ಶರಣಪ್ಪ, ಅಮರೇಶ ಗಲಗಲಿ, ಬಸನಗೌಡ ಪಾಟೀಲ, ಬಸಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net