ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ

Untitled design (19)
ಮೆಣೇಧಾಳ ಹೊರವಲಯದ ಮುರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ನಡೆಯಿತು. ಪ್ರಮುಖರಾದ ನಾಗರಾಜ ಸಂಗನಾಳ, ಅನ್ನಪೂರ್ಣಮ್ಮ, ಭಜಂತ್ರಿ, ಕನೂಲಪ್ಪ ಗುಳೇದ, ಬಾಷು ಸಾಬ, ರಾಘಪ್ಪ ಶ್ರೀರಾಮ್, ಕಾಶಿನಾಥ ನಾಗಲಿಕರ್ ಇತರರಿದ್ದರು.
Published on

ತಾವರಗೇರಾ: ನಿರ್ಣಾಯಕರ ತೀರ್ಪು ಅಂತಿಮ. ಎಲ್ಲರೂ ಅದನ್ನು ಪಾಲಿಸಬೇಕು ಎಂದು ಕಿತ್ತೂರುರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆ ಪ್ರಾಚಾರ್ಯ ನಾಗರಾಜ ಸಂಗನಾಳ ಹೇಳಿದರು

ಸಮೀಪದ ಮೆಣೇಧಾಳದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾವರಗೇರಾ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಸೋಮವಾರ ಮಾತನಾಡಿದರು.

ಕ್ರೀಡೆಯಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕವಾಗಿ ಉತ್ತಮರಾಗಿರಲು ಸಾಧ್ಯ. ಕ್ರೀಡಾಂಗಣದಲ್ಲಿ ಆಟ ಆಡುವುದು ಹೆಚ್ಚಳವಾಗಬೇಕು. ಮೊಬೈಲ್‌ಗೀಳಿನಿಂದ ಹೊರಬಂದು ವಿವಿಧ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.
ದೈಹಿಕ ಶಿಕ್ಷಣ ತಾಲೂಕು ಪರಿವೀಕ್ಷಕಿ ಸರಸ್ವತಿ ಮಾತನಾಡಿ, ಕ್ರೀಡೆಯಿಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ. ದೈಹಿಕ ಹಾಗೂ ಮಾನಸಿಕ ಉತ್ತಮರಾಗಿರಲು ಕ್ರೀಡೆ ಮುಖ್ಯ ಎಂದರು.

ಮೆಣೇಧಾಳ ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಭಜಂತ್ರಿ, ಎಸ್ಡಿಎಂಸಿ ಅಧ್ಯಕ್ಷ ಕನೂಲಪ್ಪ ಗುಳೇದ, ಮಾಜಿ ಅಧ್ಯಕ್ಷ ಬಾಷು ಸಾಬ, ತಾಲೂಕು ಶಿಕ್ಷಣ ಸಂಯೋಜಕ ರಾಘಪ್ಪ ಶ್ರೀರಾಮ್, ಸಿಆರ್‌ಪಿ ಕಾಶಿನಾಥ ನಾಗಲಿಕರ್, ಪ್ರೌಢಶಾಲೆ ಮುಖ್ಯ ಶಿಕ್ಷಕಿ ನಿಂಬಮ್ಮ ತುಂಬದ್, ಪ್ರಾಚಾರ್ಯ ಕೊಟ್ರಪ್ಪ ತಳವಾರ, ಗ್ರಾಪಂ ಪಿಡಿಒ ಬಸವರಾಜ ರಾವಣಕಿ, ಪ್ರಮುಖರಾದ ವೀರಭದ್ರಯ್ಯಸ್ವಾಮಿ ಹೊಸಮಠ, ಬಸವರಾಜ ಅಂಗಡಿ, ಕೊಟ್ರೇಶ ಮಕಾರಿ, ಬಸನಗೌಡ ಉದ್ಧಂಡಗೌಡರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net