ಸರ್ಕಾರಿ ಪಶು ಆಸ್ಪತ್ರೆ ಕಟ್ಟಡಕ್ಕೆ ಚಾಲನೆ

21 tvg 02
Published on

ತಾವರಗೇರಾ: ಪಟ್ಟಣದ ಸರ್ಕಾರಿ ಪಶು ಆಸ್ಪತ್ರೆಯ ನೂತನ ಕಟ್ಟಡವನ್ನು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಮಂಗಳವಾರ ಉದ್ಘಾಟಿಸಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನಯಡಿ ಪಶುಸಂಗೋಪನಾ ಇಲಾಖೆಯ 35 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಕೆಲ ಕಿಟಕಿ, ಬಾಗಿಲುಗಳು ಕಳೆಪೆಯಾಗಿವೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಅಧಿಕಾರಿಗಳು, ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

ಪ್ರಮುಖರಾದ ಚಂದ್ರಶೇಖರ ನಾಲತವಾಡ, ಲಿಂಗರಾಜ ಹಂಚಿನಾಳ, ರುದ್ರಗೌಡ ಕುಲಕರ್ಣಿ, ವೀರೇಶ ತಾಳಿಕೋಟಿ, ವೀರನಗೌಡ ಪಾಟೀಲ್, ಬಸನಗೌಡ, ಡಾ. ಶ್ಯಾಮೀದ್ ದೋಟಿಹಾಳ, ನಾರಾಯಣಗೌಡ ಮೆದಿಕೇರಿ, ವಿಕ್ರಮ್ ರಾಯ್ಕರ್, ಅಮರೇಶ ಕುಂಬಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net