

ತಾವರಗೇರಾ: ಸಮೀಪದ ಜುಮಲಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಗಲದಾಳ ಗ್ರಾಮದಿಂದ ನಾರಿನಾಳ ಗರಜನಾಳಗೆ ತೆರಳುವ ರಸ್ತೆ ಡಾಂಬರು ಮಳೆಗೆ ಕಿತ್ತು ಹೋಗಿದೆ.
ತಾಲೂಕಿನಲ್ಲಿ ಆಗಾಗ ಮಳೆಯಾಗುತ್ತಿದೆ. ಇದಕ್ಕೆ ರಸ್ತೆ ಡಾಂಬರ್ ಕಿತ್ತು ಹೋಗಿ ಮಳೆ ನೀರು ಸಂಗ್ರಹಗೊಂಡಿದೆ. ಇದರಿಂದ ಸಂಚಾರಕ್ಕೆ ತೊಂದರೆ ಪಡುವಂತಾಗಿದೆ. ಬೈಕ ಸವಾರರು, ಪಾದಚಾರಿಗಳು ರಸ್ತೆಯಲ್ಲಿ ಬೀಳುವಂತಾಗಿದೆ. ಅಲ್ಲದೇ ಗ್ರಾಮದ ಒಳಗಿನ ರಸ್ತೆಯೂ ಸಹ ಕೆಸರು ಗದ್ದೆಯಂತಾಗಿವೆ. ಸಂಬಂಧ ಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರದ ಬಸನಗೌಡ ಪಾಟೀಲ, ಮುತ್ತುರಾಜ, ಲಾಡಸಾಬ, ಶಾಮವ್ವ, ರಾಮಣ್ಣ , ಹನಮೇಶ ಒತ್ತಾಯಿಸಿದ್ದಾರೆ.