ಪ್ರಥಮ, ದ್ವಿತೀಯ ಸ್ಥಾನ ಪಡೆದ ಬೆಂಗಳೂರು ತಂಡ

Khokho Tournament
ತಾವರಗೇರಾದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಬೆಂಗಳೂರಿನ ಯಂಗ್ ಪಯೋನೀಯರ್ ಸ್ಫೋರ್ಟ್ಸ್ ಕ್ಲಬ್ ಪ್ರಥಮ ಸ್ಥಾನ ಪಡೆಯಿತು. ಆಟಗಾರರೊಂದಿಗೆ ಜಿಲ್ಲಾ ಖೋಖೋ ಅಸೋಸಿಯೇಷನ್ ಅಧ್ಯಕ್ಷ ಸಾಗರಬೇರಿ, ಗೌರವಾಧ್ಯಕ್ಷ ವೀರನಗೌಡ ಪಾಟೀಲ್, ರಾಜ್ಯ ಚೇರ್ಮನ್ ಸಿದ್ಧಲಿಂಗಮೂರ್ತಿ, ರಾಜ್ಯ ಕೋಆರ್ಡಿನೇಟರ್ ಕರಿಬಸಪ್ಪ ಇತರರಿದ್ದಾರೆ.
Published on

ತಾವರಗೇರಾ: ಮೂರು ದಿನದಿಂದ ಇಲ್ಲಿನ ಎಸ್‌ಎಸ್‌ವಿ ಕಾಲೇಜು ಆವರಣದಲ್ಲಿ ನಡೆದಿದ್ದ ರಾಜ್ಯಮಟ್ಟದ ಖೋಖೋ ಪಂದ್ಯಾವಳಿಗೆ ಸೋಮವಾರ ತೆರೆ ಬಿದ್ದಿತು.

ಬೆಂಗಳೂರಿನ ಯಂಗ್ ಪಯೋನೀಯರ್ ಸ್ಫೋರ್ಟ್ಸ್ ಕ್ಲಬ್ ಪ್ರಥಮ ಸ್ಥಾನ (50 ಸಾವಿರ ರೂ. ನಗದು, ಟ್ರೋಫಿ, ಮೆಡಲ್ ಹಾಗೂ ಪ್ರಶಸ್ತಿ ಪತ್ರ), ಬೆಂಗಳೂರಿನ ಪಯೋನೀಯರ್ ತಂಡವು ದ್ವಿತೀಯ ಸ್ಥಾನ (35 ಸಾವಿರ ರೂ. ನಗದು, ಟ್ರೋಫಿ, ಮೆಡಲ್, ಪ್ರಶಸ್ತಿ ಪತ್ರ), ದಾವಣಗೆರೆ ಜಿಲ್ಲಾ ಸ್ಫೋರ್ಟ್ಸ್ ಕ್ಲಬ್ ಮೂರನೇ ಸ್ಥಾನ (25 ಸಾವಿರ ರೂ., ಟ್ರೋಫಿ, ಮೆಡಲ್, ಪ್ರಶಸ್ತಿ ಪತ್ರ) ಮತ್ತು ಮೈಸೂರಿನ ಚಾಮುಂಡೇಶ್ವರಿ ಸ್ಫೋರ್ಟ್ಸ್ ಕ್ಲಬ್ ನಾಲ್ಕನೇ ಸ್ಥಾನ (15 ಸಾವಿರ ರೂ. ನಗದು, ಟ್ರೋಫಿ, ಮೆಡಲ್, ಪ್ರಶಸ್ತಿ ಪತ್ರ) ಪಡೆಯಿತು.

ಸಮಾರೋಪದಲ್ಲಿ ಜಿಲ್ಲಾ ಖೋಖೋ ಅಸೋಸಿಯೇಷನ್ ಅಧ್ಯಕ್ಷ ಸಾಗರಬೇರಿ, ಗೌರವಾಧ್ಯಕ್ಷ ವೀರನಗೌಡ ಪಾಟೀಲ್, ರಾಜ್ಯ ಚೇರ್ಮನ್ ಸಿದ್ಧಲಿಂಗ ಮೂರ್ತಿ, ರಾಜ್ಯ ಕೋಆರ್ಡಿನೇಟರ್ ಕರಿಬಸಪ್ಪ, ಕೊಟ್ರೇಶ ಮುಕಾರಿ, ಪದಾಧಿಕಾರಿಗಳಾದ ಸಂಜೀವ ಛಲವಾದಿ, ಚನ್ನಪ್ಪ ಕುಂಬಾರ, ಮಂಜುನಾಥ ಜೂಲಕುಂಟಿ, ಪೊಲೀಸ್ ಇಲಾಖೆಯ ಬಸವರಾಜ ಇಂಗಳದಾಳ, ಅಮರೇಶ ನಾಲತವಾಡ , ಶರಣಬಸವ ನವಲಹಳ್ಳಿ, ಶಾಮೀದಸಾಬ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net