ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ

161122 Tavaragera Vajpayee Urban Estates Title Deed Distribution Programme
ತಾವರಗೇರಾ ಮೇಘಾ ಫಂಕ್ಷನ್ ಹಾಲ್‌ನಲ್ಲಿ ಪಪಂ ಏರ್ಪಡಿಸಿದ್ದ ವಾಜಪೇಯಿ ನಗರ ನಿವೇಶನಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಲಾಯಿತು.
Published on

ತಾವರಗೇರಾ: ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು. ಸ್ಥಳೀಯ ಮೇಘಾ ಫಂಕ್ಷನ್ ಹಾಲ್‌ನಲ್ಲಿ ಬುಧವಾರ ಪಪಂ ಏರ್ಪಡಿಸಿದ್ದ ವಾಜಪೇಯಿ ನಗರ ನಿವೇಶನಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸದ್ಯ ವಿಠಲಾಪೂರ ರಸ್ತೆಯ 11 ಎಕರೆ 20 ಗುಂಟೆಯಲ್ಲಿ 350 ನಿವೇಶನಗಳನ್ನು ಗುರುತಿಸಿದ್ದು, ಅರ್ಹ ಫಲಾನುಭವಿಗಳಿಗೆ ಈಗ ನಿವೇಶನಗಳ ಹಕ್ಕುಪತ್ರ ವಿತರಿಸಲಾಗುತ್ತಿದೆ. ಮನೆ ಇಲ್ಲದವರು ಪಂಚಾಯಿತಿಗೆ ಅರ್ಜಿ ನೀಡಬೇಕು. ಅವರಿಗೂ ಸಹ ಗುರುತಿಸಿ ನಿವೇಶನ ನೀಡಲಾಗುವುದು ಎಂದರು.

ಪಪಂ ಮಾಜಿ ಅಧ್ಯಕ್ಷ ವಿಕ್ರಮ್ ರಾಯ್ಕರ್, ಪಪಂ ಪ್ರಭಾರಿ ಮುಖ್ಯಾಧಿಕಾರಿ ಪ್ರಹ್ಲಾದ್ ಜೋಶಿ, ಶ್ಯಾಮೂರ್ತಿ ಕಟ್ಟಿಮನಿಯವರಿಗೆ ಪೌರ ಸನ್ಮಾನ ಮಾಡಲಾಯಿತು. ಶರಣಬಸವ ಸೈಂದರ್, ಪ್ರಾಚಾರ್ಯ ಲಕ್ಷ್ಮಣಸಿಂಗ್ ವಗರನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net