

ತಾವರಗೇರಾ: ಚಿನ್ನಾಭರಣ ಕಳವು ಪ್ರಕರಣವನ್ನು ಸ್ಥಳೀಯ ಠಾಣೆ ಪೊಲೀಸರು ಕೇವಲ ಆರು ತಾಸಿನಲ್ಲಿ ಬೇಧಿಸಿದ್ದಾರೆ. ಹೊಮ್ಮಿನಾಳ ಗ್ರಾಮದ ಮೌಲಾಬೀ ಪಿಂಜಾರ ಮನೆಯಲ್ಲಿ ಗುರುವಾರ 22 ಗ್ರಾಂ, ಮೂರು ಗುಂಜಿ ಚಿನ್ನ ಕಳ್ಳತನವಾಗಿತ್ತು. ಈ ಕುರಿತು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆಗೆ ಇಳಿದ ಪಿಎಸ್‌ಐ ವೈಶಾಲಿ ಜಳಕಿ ನೇತೃತ್ವದ ತಂಡ, ಆರೋಪಿ ಕಂದಕೂರ ಗ್ರಾಮದ ಶಾಮೀದ್‌ಸಾಬ್ ತಾಳಕೇರಿಯನ್ನು ಬಂಧಿಸಿ ಚಿನ್ನಾಭರಣ ಜಪ್ತಿ ಮಾಡಿದೆ. ಶಾಮೀದ್ ಸಾಬ್‌ನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಎಎಸ್‌ಐಗಳಾದ ಮಲ್ಲಪ್ಪ ವಜ್ರದ, ಶಿವಪುತ್ರಪ್ಪ, ಪೇದೆಗಳಾದ ಬಸವರಾಜ, ಯಮನಪ್ಪ, ವೀರೇಶ , ಆನಂದ , ಗುಂಡಪ್ಪ, ಆನಂದ , ಮಹಾಂತೇಶ , ಕರಿಯಪ್ಪ ಕಾರ್ಯಾಚರಣೆ ನಡೆಸಿದ್ದು, ಎಸ್ಪಿ ಶ್ಲಾಘಿಸಿದ್ದಾರೆ.