ಮಕ್ಕಳಿಗಾಗಿ ವಾಲಿಬಾಲ್ ಸ್ಪರ್ಧೆ ಆಯೋಜನೆ

Tavaragera sports
ತಾವರಗೇರಾದಲ್ಲಿ ಮಕ್ಕಳ ದಿನದ ಅಂಗವಾಗಿ ಓಪನ್ ವಾಲಿಬಾಲ್ ಟೂರ್ನಮೆಂಟ್ ನಡೆಯಿತು.
Published on

ತಾವರಗೇರಾ: ಮಕ್ಕಳ ದಿನದ ಪ್ರಯುಕ್ತ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಹಾಗೂ ಸ್ಥಳೀಯ ಸ್ಫೋರ್ಟ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ 16ವರ್ಷದೊಳಗಿನ ಹುಡುಗರಿಗಾಗಿ ಶಾಮೀದಲಿ ದರ್ಗಾ ಆವರಣದಲ್ಲಿ ಈಚೆಗೆ ವಾಲಿಬಾಲ್ ಪಂದ್ಯೆ ಏರ್ಪಡಿಸಲಾಗಿತ್ತು.

ಪಪಂ ಸದಸ್ಯ ವೀರನಗೌಡ ಪಾಟೀಲ್, ಮಾಜಿ ಸದಸ್ಯ ಅಮರೇಶ ಗಾಂಜಿ ಜಂಟಿಯಾಗಿ ಟೂರ್ನಮೆಂಟ್‌ಗೆ ಚಾಲನೆ ನೀಡಿದರು.
ಸ್ಥಳೀಯ ಐದು ತಂಡಗಳು ಭಾಗವಹಿಸಿದ್ದವು. ನಾಗು ತಂಡ ಪ್ರಥಮ ಸ್ಥಾನಗಳಿಸುವ ಮೂಲಕ ಟ್ರೋಫಿ ಮತ್ತು 3000 ರೂ. ನಗದು ಬಹುಮಾನ ಪಡೆಯಿತು.

ಎರಡನೇ ಸ್ಥಾನ ಪಡೆದ ಅಯಾನ್ ಟೀಮ್, ಟ್ರೋಫಿ ಮತ್ತು 2000ರೂ. ಬಹುಮಾನ ಗೆದ್ದುಕೊಂಡಿತು. ಉತ್ತಮ ಹೊಡೆತಗಾರನಾಗಿ ಮಣಿ, ಉತ್ತಮ ಆಲ್ ರೌಂಡರ್ ಮೌನೇಶ ಹಾಗೂ ಉತ್ತಮ ಲಿಫ್ಟ್ ಮಾಡಿದ ಗೌತಮಗೆ ಟ್ರೋಫಿ ಹಾಗೂ ತಲಾ 500 ರೂ. ನಗದು ಬಹುಮಾನ ನೀಡಲಾಯಿತು.


ಪ್ರಮುಖರಾದ ಅರುಣಕುಮಾರ ನಾಲತವಾಡ, ವಿರೇಶ ತಾಳಿಕೋಟೆ, ಪಪಂ ಸದಸ್ಯ ದಶರಥಸಿಂಗ್, ಫಯಾಜ್ ಬನ್ನು, ಸಿಆರ್‌ಸಿ ಕಾಶಿನಾಥ್ ನಾಗಲೀಕರ, ಟೂರ್ನಮೆಂಟ್ ಮುಖ್ಯಸ್ಥ ಗವಿಸಿದ್ದಪ್ಪ ನಾಗಲೀಕರ್, ದರ್ಗಾದ ಮುತುವಲ್ಲಿ ಸೈಯದ್ ಮುಜಾವಾರ, ಶಿಕ್ಷಕ ಪಿ.ಎಸ್.ಮಳಗಿ, ಶಿಕ್ಷಕ ಯಮನಪ್ಪ ಸಿರವಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net