ರೋಗದ ಲಕ್ಷಣಗಳಿದ್ದಲ್ಲಿ ತಪಾಸಣೆ ಮಾಡಿಸಿಕೊಳ್ಳಿ

Untitled design(19)
Published on

ತಾವರಗೇರಾ: ಕುಷ್ಟರೋಗವನ್ನು ಭಾರತದಿಂದ ಹೋಗಲಾಡಿಸಿ ಗಾಂಧೀಜಿ ಕನಸನ್ನು ನನಸಾಗಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಆರೋಗ್ಯ ಇಲಾಖೆಯ ಆಪ್ತ ಸಮಾಲೋಚಕ ಅರುಣಕುಮಾರ ಹೇಳಿದರು.

ಇಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ಸಮುದಾಯ ಆರೋಗ್ಯ ಕೇಂದ್ರ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿಯಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ದಿನವನ್ನು ಕುಷ್ಟರೋಗ ನಿರ್ಮೂಲನಾ ದಿನವಾಗಿ ಆಚರಿಸಲಾಗುತ್ತಿದೆ ಎಂದರು.

ಕುಷ್ಠರೋಗ ತಪ್ಪು ಕಲ್ಪನೆಗಳನ್ನು ಹೋಗಲಾಡಿಸೋಣ ಎಲ್ಲರೂ ಕೈ ಜೋಡಿಸಬೇಕು. ಚರ್ಮದ ಬಣ್ಣದಲ್ಲಿ ಯಾವುದೇ ತಿಳಿ ಬಿಳಿ ತಾಮ್ರ, ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು, ಪೂರ್ಣ ಪ್ರಮಾಣದ ಸ್ಪರ್ಶಜ್ಞಾನ ಇಲ್ಲದಿರುವುದು ಕಂಡು ಬಂದರೆ ಕೂಡಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ತಪಾಸಣೆಯನ್ನು ಮಾಡಿಸಬೇಕು ಎಂದು ತಿಳಿಸಿದರು.

ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಹಿರೇಗೊಣ್ಣಾಗರ ಅಧ್ಯಕ್ಷೆ ವಹಿಸಿದ್ದರು.ಶಾಲೆಯ ಸಹ ಶಿಕ್ಷಕಿ ಶ್ರೀದೇವಿ ಜ್ಞಾನಮೂರ್ತಿ, ಪ್ರಮುಖರಾದ ಮಂಜುನಾಥ್ ಬಿಳೇಗುಡ್ಡ , ವೆಂಕನಗೌಡ ಪಾಟೀಲ್, ಶಿವಲೀಲಾ ಕವಿತಾಳ , ಆರೋಗ್ಯ ಇಲಾಖೆಯ ಅನ್ವರ ಸಾಬ, ಮಂಜುಳಾ ಇತರರಿದ್ದರು. ಸಹ ಶಿಕ್ಷಕ ಮಂಜುನಾಥ ಬಿಳೇಗುಡ್ಡ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಶಿವಲೀಲಾ ಸ್ವಾಗತಿಸಿದರು, ವೆಂಕನಗೌಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net